FREE

On the App Store

FREE

On the App Store

Widgets Magazine

ಜಲಪ್ರಳಯ ಮಾನವ ನಿರ್ಮಿತ :ಪರಿಸರವಾದಿಗಳು

ಡೆಹ್ರಾಡೂನ್‌, ಶನಿವಾರ, 22 ಜೂನ್ 2013 (08:53 IST)

Widgets Magazine

PR
PR
ಉತ್ತರ ಭಾರತ ಜಲಪ್ರಳಯದಿಂದ ತತ್ತರಿಸಿ ಹೋಗಿದೆ . ನೈಸರ್ಗಿಕ ವಿಕೋಪಕ್ಕೆ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಗಂಗಾ ಮಾತೆ ಮಾನವಮೇಲೆ ಮುನಿಸಿಕೊಂಡದ್ದು ಯಾಕೆ? ಹಿಂದೆ ಪುರಾಣದಲ್ಲಿ ಏನಾದರು ನಡೆದಿತ್ತಾ? ಯಾರದಾದರೂ ಶಾಪವಿತ್ತಾ ? ಈ ನಿಸರ್ಗಕ್ಕಾದರು ಯಾಕೆ ಮನುಕುಲದ ಮೇಲೆ ಮುನಿಸು ? ಹೀಗೆ ಸಾಕಷ್ಟು ಕಡೆ ಸಾಕಷ್ಟು ಪ್ರಶ್ನೆಗಳನ್ನು ಜನ ಕೇಳ್ತಾ ಶಪಿಸುತ್ತಿದ್ದಾರೆ . ಆದರೆ ಈ ನಿಸರ್ಗ ವಿಕೋಪಕ್ಕೆ ಯಾರ ಮುನಿಸು ಇಲ್ಲ, ಇದಕ್ಕೆಲ್ಲ ಕಾರಣ ಮಾನವನೇ ಅಂತ ಪರಿಸರವಾದಿಗಳು ಹೇಳುತ್ತಾರೆ. ಇದೊಂದು ಮಾನವ ನಿರ್ಮಿತ ಜಲ ಪ್ರಳಯ ಅಂತ ಪರಿಸರವಾದಿಗಳು ವಾದಿಸುತ್ತಿದ್ದಾರೆ.

ಮೇಘಸ್ಫೋಟ, ಪ್ರವಾಹ ಹಾಗೂ ಭೂಕುಸಿತದಿಂದ ನೂರಾರು ಮಂದಿ ಸಾವನ್ನಪ್ಪಿ, ಸಾವಿರಾರು ಮಂದಿ ಕಣ್ಮರೆಯಾಗಿರುವ ಉತ್ತರಾಖಂಡದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿರುವ ಮಧ್ಯೆಯೇ, ಈ ದುರಂತ ಮಾನವ ನಿರ್ಮಿತವೇ ಅಥವಾ ನೈಸರ್ಗಿಕ ಸೃಷ್ಟಿಯೇ ಎಂಬ ಚರ್ಚೆ ಆರಂಭವಾಗಿದೆ.

ಉತ್ತರಾಖಂಡದ 'ಜಲಪ್ರಳಯ' ಮಾನವ ಸೃಷ್ಟಿ ಎಂದು ಪರಿಸರವಾದಿಗಳು ವಾದಿಸುತ್ತಿದ್ದರೆ, ಮುಖ್ಯಮಂತ್ರಿ ವಿಜಯ್‌ ಬಹುಗುಣ ಇದನ್ನು ನಿರಾಕರಿಸಿ ನೈಸರ್ಗಿಕ ದುರಂತ ಎಂದು ಹೇಳಿದ್ದಾರೆ. ಅಲ್ಲದೆ ಉತ್ತರಾಖಂಡದಲ್ಲಿನ ಪರಿಸ್ಥಿತಿಗೆ 'ಸುನಾಮಿ' ಕಾರಣ ಎಂದೂ ಹೋಲಿಕೆ ಮಾಡಿದ್ದಾರೆ.

ಆದರೆ, ಗಿರಿಕಂದರಗಳಿಂದ ಕೂಡಿರುವ ಉತ್ತರಾಖಂಡದಲ್ಲಿ ಈ ಮಟ್ಟಿಗಿನ ದುರಂತ ಸಂಭವಿಸಲು ಮನುಷ್ಯನ ದುರಾಸೆಯೇ ಕಾರಣ ಎಂಬುದನ್ನು ಬಹುತೇಕ ಮಂದಿ ಒಪ್ಪಿಕೊಳ್ಳುತ್ತಿದ್ದಾರೆ. ನದಿ ತಟದಲ್ಲಿ ಮಿತಿಮೀರಿದ ಅತಿಥಿ ಗೃಹ, ಹೋಟೆಲ್‌ ಹಾಗೂ ಭಾರೀ ಪ್ರಮಾಣದ ಒತ್ತುವರಿಯಾಗಿರುವುದರಿಂದ ಈ ದುರಂತ ಎಂದೋ ಆಗಬೇಕಿತ್ತು ಎಂದು ಹಲವರು ವಾದಿಸುತ್ತಿದ್ದಾರೆ.

ನದಿ ತೀರದ 100 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೆ ರೀತಿಯ ಕಟ್ಟಡಗಳನ್ನು ನಿರ್ಮಿಸಬಾರದು ಎಂಬ ನಿಯಮ 2002ರಿಂದಲೇ ಇದ್ದರೂ ಅದನ್ನು ಉಲ್ಲಂ ಸುತ್ತಲೇ ಬರಲಾಗಿದೆ. ಅದೂ ಅಲ್ಲದೆ ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕೇಂದ್ರ ಸರ್ಕಾರ ಘೋಷಿಸಿದ್ದರೂ ಅದನ್ನು ಜಾರಿಗೆ ತರಲು ಸರ್ಕಾರವೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.


ವೆಬ್‌ದುನಿಯಾ ಕನ್ನಡ ಮೊಬೈಲ್ ಅಪ್ಲಿಕೇಶನ್ ಇದೀಗ iTunes ನಲ್ಲಿ ಸಹ ಲಭ್ಯ, ಡೌನ್‌ಲೋಡ್ ಮಾಡಲು ಕ್ಲಿಕ್ ಮಾಡಿ. ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಕ್ಲಿಕ್ ಮಾಡಿ. ಸುದ್ದಿಗಳನ್ನು ಓದಿ ಮತ್ತು ನಮ್ಮ ಫೇಸ್‌ಬುಕ್ ಪುಟದಲ್ಲಿ ಪ್ರತಿಕ್ರಿಯೆ ನೀಡಿ ಹಾಗೂ ನಮ್ಮ ಟ್ವಿಟ್ಟರ್ ಪುಟವನ್ನು ಅನುಸರಿಸಿ.


Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine
Widgets Magazine

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...

Widgets Magazine
Widgets Magazine

 

Widgets Magazine
Widgets Magazine

ಸಂಪಾದಕೀಯ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

MacD

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ಪ್ರಾರಂಭ ...

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

Rain

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ಸೇರಿದಂತೆ ಹಲವೆಡೆ ...

ಹೊಚ್ಚ

ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ : ಜೈರಾಮ್ ರಮೇಶ್

ದೇಶದಲ್ಲಿ ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ ಎಂದು ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ.

ಮೋದಿ ವಾಜಪೇಯಿಯವರನ್ನು ಕೂಡ ಹೊರ ಹಾಕುತ್ತಿದ್ದರು : ರಾಹುಲ್ ಗಾಂಧಿ

ಬಿಜೆಪಿಯ ಹಿರಿಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಜೀವನದಲ್ಲಿ ಮುಂದುವರೆಯುತ್ತಿದ್ದಿದ್ದರೆ ...

Widgets Magazine
Widgets Magazine