Widgets Magazine Widgets Magazine

ಮತ್ತೆ ವಾರಣಾಸಿಯಲ್ಲಿ ಕೇಜ್ರಿವಾಲ್ ಮೇಲೆ ಕಲ್ಲೆಸೆತ

ವಾರಣಾಸಿ, ಶುಕ್ರವಾರ, 18 ಏಪ್ರಿಲ್ 2014 (15:09 IST)

Widgets Magazine

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮೇಲೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕ್ಯಾಂಪಸ್ ಬಳಿ ಕೆಲ ಯುವಕರು ಕಲ್ಲುಗಳನ್ನು ಎಸೆಯುತ್ತ, ಅವಹೇಳನಕಾರಿ ಮಾತುಗಳನ್ನು ಆಡಿದರು ಎಂದು ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

PTI

ಸುದ್ದಿ ಸಂಸ್ಥೆ ಐಎಎನ್ಎಸ್ ಪ್ರಕಾರ, ದಾಳಿಕೋರರು ಮೋದಿ ಪರವಾಗಿ ಘೋಷಣೆ ಕೂಗುತ್ತಿದ್ದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಎದುರಾಗಿ ಕೇಜ್ರಿವಾಲ್ ವಾರಣಾಸಿಯಲ್ಲಿ ಕಣಕ್ಕಿಳಿದಿದ್ದಾರೆ. ಸಮೀಕ್ಷೆಗಳ ಪ್ರಕಾರ ಮೋದಿ ವಾರಣಾಸಿಯಲ್ಲಿ ಅತ್ಯುತ್ತಮ ಗೆಲುವನ್ನು ದಾಖಲಿಸಲಿದ್ದಾರೆ.

ತನ್ನ ಚುನಾವಣಾ ಪ್ರಚಾರದ ವೇಳೆ ಕೇಜ್ರಿವಾಲ್ ಪದೇ ಪದೇ ಆಕ್ರಮಣಕ್ಕೊಳಗಾಗುತ್ತಿದ್ದು, ತಮ್ಮ ರಸ್ತೆ ಪ್ರದರ್ಶನಗಳ ಅವಧಿಯಲ್ಲಿ ಕನಿಷ್ಠ ಮೂವರಿಂದ ಹಲ್ಲೆಗೊಳಗಾಗಿದ್ದಾರೆ, ಅವರ ಮೇಲೆ ಒಮ್ಮೆ ಶಾಯಿ ಸಿಂಪಡಿಸಲಾಗಿದೆ - ಈ ಚುನಾವಣೆಯ ಸಮಯದಲ್ಲಿ, ಈ ತಿಂಗಳ ಪ್ರಾರಂಭದಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ಅವರ ಕಪಾಳಕ್ಕೆ ಹೊಡೆದಿದ್ದ.

ನಿನ್ನೆ ವಾರಣಾಸಿಯಲ್ಲಿ ಮನೆ- ಮನೆ ಪ್ರಚಾರ ಮಾಡುತ್ತಿದ್ದ ಕೇಜ್ರಿವಾಲ್ ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ಪ್ರಸಿದ್ಧ ಕೇಶವ ಪಾನ್ ಅಂಗಡಿ ಬಳಿ ಇದ್ದ ಸಂದರ್ಭದಲ್ಲಿ ದಾಳಿ ನಡೆದಿದೆ.

ವರದಿಯ ಪ್ರಕಾರ ಪಾನ್ ಅಂಗಡಿ ಮಾಲೀಕರಾದ ಕೇಶವ ಚೌರಾಸಿಯಾ ವಾರಣಾಸಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮೋದಿಗೆ ಔಪಚಾರಿಕವಾಗಿ ಸಲಹೆ ನೀಡಿದ್ದರು ಮತ್ತು ಅವರು ನಾಮಪತ್ರ ಸಲ್ಲಿಸುವಾಗ ಸಾಥ್ ನೀಡಿದ್ದರು.

ಕಳೆದ ತಿಂಗಳು ನಡೆದ ಮೋದಿಯವರ ಪ್ರಸಿದ್ಧ ಕಾರ್ಯಕ್ರಮ 'ಚಾಯ್ ಪೆ ಚರ್ಚಾ' ಅಥವಾ ಸಾಮೂಹಿಕ ಕಾರ್ಯಕ್ರಮದಲ್ಲಿ ಮೋದಿಯವರಿಗೆ ಚಹಾ ಹೋಟೆಲ್ ಮಾಲೀಕ ಪಪ್ಪು ಕೂಡಾ ಆಪ್ತರಾಗಿದ್ದರು.

ಬಿಜೆಪಿ ಬೆಂಬಲಿಗರೇ ಕೇಜ್ರಿವಾಲ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವುದಕ್ಕೆ ಪಪ್ಪು ಮತ್ತು ಕೇಶವ್ ಚೌರಾಸಿಯಾ ಬಿಜೆಪಿ ಬೆಂಬಲಿಗರಾಗಿರುವುದೇ ಪ್ರಮುಖ ಸಾಕ್ಷಿಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡರು ಆರೋಪಿಸಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

ಈಕೆಗಿಲ್ಲ ಜನನಾಂಗ, ಆದರೂ ಕೂಡ ಮಗುವಿಗೆ ಜನ್ಮ ನೀಡಳಿದ್ದಾಳೆ

ದೆಹಲಿ : ಮೆಕ್ಸಿಕೋದಲ್ಲಿ ಒಬ್ಬ ಮಹಿಳೆ ಇದ್ದಾಳೆ, ಈಕೆಗೆ ಜಜನಾಂಗವೇ ಇಲ್ಲವಂತೆ. ವಿಶ್ವದಲ್ಲಿ ಜನನಾಂಗ ...

ಕನಕಪೂರದಲ್ಲಿ ಕಂಪಿಸಿದ ಭೂಮಿ

ಕನಕಪುರ: ಇಂದು ಬೆಳ್ಳಿಗ್ಗೆ ಕನಕಪುರ ತಾಲೂಕಿನಲ್ಲಿ ಭೂಮಿ ಕಂಪಿಸಿದೆ. ರಾಮನಗರ ಜಿಲ್ಲೆಯ ಕನಕಪುರದ ...

ನೀತಿ ಸಂಹಿತೆ ಉಲ್ಲಂಘಿಸಿದ ರಾಮದೇವ ಬಾಬಾ

ಫತೆಹಪುರ : ಯೋಗ ಗುರು ರಾಮದೇವರ ವಿರುದ್ದ ನೀತಿ ಸಂಹಿತೆ ಉಲ್ಲಂಘನೆಯ ಕೇಸು ದಾಖಲಾಗಿದೆ. ಉತ್ತರ ಪ್ರದೇಶದ ...

ಪಾಕಿಸ್ತಾನದಲ್ಲಿ ರಸ್ತೆ ಅಫಘಾತ: 30 ಜನರು ಸಾವು

ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ಸುಕುರ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಒಂದು ಟ್ರೇಲರ್ ...

Widgets Magazine Widgets Magazine