Widgets Magazine Widgets Magazine

ಮದುವೆ ದಿಬ್ಬಣದ ಮೇಲೆ ಟ್ರಕ್ ಹರಿದು 8 ಜನರ ಸಾವು

ಧನಬಾದ್, ಶನಿವಾರ, 19 ಏಪ್ರಿಲ್ 2014 (12:59 IST)

Widgets Magazine

ಧನಬಾದ್ ನಗರದಿಂದ ಸುಮಾರು 45 ಕೀ ಮಿ ದೂರದ ಮುಗಾಮ್ ಎಂಬ ಊರಿನ ಸಮೀಪದ ಜಿಟಿರಸ್ತೆಯಲ್ಲಿ ಮದುವೆ ಮೆರವಣಿಗೆಯೊಂದರ ಮೇಲೆ ಲಾರಿ ಹರಿದು 8 ಜನರು ದುರ್ಮರಣವನ್ನಪ್ಪಿ, 6 ಜನ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.

PTI

ಸಾವಿಗೀಡಾಗಿರುವವರಲ್ಲಿ ಮದುಮಗನ ತಂದೆಯೂ ಸೇರಿದ್ದಾನೆಂದು ತಿಳಿದು ಬಂದಿದೆ.

ಅಕ್ರಮ ಕಲ್ಲಿದ್ದಲನ್ನು ತುಂಬಿಕೊಂಡು ಬರುತ್ತಿದ್ದ ಟ್ರಕ್ ನಿರಸಾ ಮಾರುಕಟ್ಟೆಯ ಸಮೀಪ ಒಂದು ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಅಲ್ಲಿ ನಿಲ್ಲಿಸದೇ ವೇಗವಾಗಿ ಬರುತ್ತಿತ್ತು. ನಂತರ ಮದುವೆ ಮೆರವಣಿಗೆಯ ಮೇಲೆ ಹರಿದು 8 ಜನರ ಅಕಾಲಿಕ ಸಾವಿಗೆ ಕಾರಣವಾಗಿದೆ. ರಾತ್ರಿ ಸುಮಾರು 10.30 ರ ಸುಮಾರಿಗೆ ಘಟನೆ ನಡೆದಿದ್ದು, ಆ ಸಮಯದಲ್ಲಿ ಅವರೆಲ್ಲರೂ ವಧುವಿನ ಮನೆ ಕಡೆ ನಡೆದು ಹೊರಟಿದ್ದರು ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಘಟನೆಯಲ್ಲಿ 4 ಜನ ಸ್ಥಳದಲ್ಲೇ ಸಾವನ್ನಪ್ಪಿದರೆ, ವರನ ತಂದೆಯ ಸಮೇತ ಉಳಿದ 4 ಜನ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟರು. ಗಾಯಗೊಂಡಿರುವ 6 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮದುವೆ ಜೆಮಶೆಡ್‌ಪುರದ ಬಾರಿಹಿಡ್ ಕಡೆಯಿಂದ ನಿರಸಾ ಬ್ಲಾಕ್‌ನ ಮನ್‌ಮನ್‌ಡಿಬ್ ಕೋಲಿಯಾರಿ ಕಾಲೋನಿಗೆ ಹೋಗುತ್ತಿತ್ತು.

ಉದ್ರಿಕ್ತರಾದ ಸ್ಥಳೀಯರು ಟ್ರಕ್‌ನ್ನು ಸುಟ್ಟು ಹಾಕಿದರು ಮತ್ತು ರಾಷ್ಟ್ರೀಯ ಹೆದ್ದಾರಿ ಸಂ 2ನ್ನು ಸುಮಾರು ಎರಡು ಗಂಟೆಗಳ ಕಾಲ ತಡೆಗಟ್ಟಿದರು. ಟ್ರಕ್ ಚಾಲಕ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

ಈಕೆಗಿಲ್ಲ ಜನನಾಂಗ, ಆದರೂ ಕೂಡ ಮಗುವಿಗೆ ಜನ್ಮ ನೀಡಳಿದ್ದಾಳೆ

ದೆಹಲಿ : ಮೆಕ್ಸಿಕೋದಲ್ಲಿ ಒಬ್ಬ ಮಹಿಳೆ ಇದ್ದಾಳೆ, ಈಕೆಗೆ ಜಜನಾಂಗವೇ ಇಲ್ಲವಂತೆ. ವಿಶ್ವದಲ್ಲಿ ಜನನಾಂಗ ...

ಕನಕಪೂರದಲ್ಲಿ ಕಂಪಿಸಿದ ಭೂಮಿ

ಕನಕಪುರ: ಇಂದು ಬೆಳ್ಳಿಗ್ಗೆ ಕನಕಪುರ ತಾಲೂಕಿನಲ್ಲಿ ಭೂಮಿ ಕಂಪಿಸಿದೆ. ರಾಮನಗರ ಜಿಲ್ಲೆಯ ಕನಕಪುರದ ...

ನೀತಿ ಸಂಹಿತೆ ಉಲ್ಲಂಘಿಸಿದ ರಾಮದೇವ ಬಾಬಾ

ಫತೆಹಪುರ : ಯೋಗ ಗುರು ರಾಮದೇವರ ವಿರುದ್ದ ನೀತಿ ಸಂಹಿತೆ ಉಲ್ಲಂಘನೆಯ ಕೇಸು ದಾಖಲಾಗಿದೆ. ಉತ್ತರ ಪ್ರದೇಶದ ...

ಪಾಕಿಸ್ತಾನದಲ್ಲಿ ರಸ್ತೆ ಅಫಘಾತ: 30 ಜನರು ಸಾವು

ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ಸುಕುರ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಒಂದು ಟ್ರೇಲರ್ ...

Widgets Magazine Widgets Magazine