ಕನ್ನಡ ಸಿನೆಮಾ 'ಕೇರ್ ಆಫ್ ಫೂಟ್‌ಪಾತ್' ನಿರ್ದೇಶಿಸುವ ಮೂಲಕ ವಿಶ್ವದ ಅತಿಕಿರಿಯ ಸಿನಿನಿರ್ದೇಶಕ ಎಂಬ ಖ್ಯಾತಿಗಳಿಸಿದ ಕನ್ನಡಪುಟಾಣಿ ಮಾ.ಕಿಷನ್‌ಗೆ ಎರಡು ಪುಟಾಣಿ ಆಸ್ಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಇಟೆಲಿಯಲ್ಲಿ ನಡೆಯುತ್ತಿರುವ ಗಿಫೋನಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಿಷನ್‌ಗೆ ಪುಟಾಣಿ ಆಸ್ಕರ್ ಪ್ರಶಸ್ತಿ ಲಭಿಸಿದೆ. ಈತನಿಗೆ ಈ ವಿಭಾಗದಲ್ಲಿ ಎರಡು ಪ್ರಶಸ್ತಿಗಳು ಲಭಿಸಿರುವುದು ಪ್ರಶಸ್ತಿ ಮಂಡಳಿ ಪ್ರತಿಭೆಯನ್ನು ಗುರುತಿಸಿರುವುದರ ಸೂಚನೆಯಾಗಿದೆ.
ಎಳೆಹರೆಯದಲ್ಲೇ ಕನ್ನಡ ಚಿತ್ರ ಕೇರ್ ಆಫ್.. ನಿರ್ದೇಶಿಸುವ ಮೂಲಕ ಬೀದಿ ಬದಿ ಬಾಲಕರ ಸಮಸ್ಯೆಯನ್ನು ಅನಾವರಣಗೊಳಿಸುವ ಪ್ರಯತ್ನ ಕಿಷನ್‌ನಿಂದ ನಡೆದಿತ್ತು.
ಕೇರ್ ಆಫ್ ಫೂಟ್‌ಪಾತ್ ಚಿತ್ರವು ಭಾರತದ ಇತರ ಭಾಷೆಗಳಲ್ಲೂ ಮರು ನಿರ್ಮಾಣ ಅಥವಾ ಭಾಷಾಂತರ ಗೊಂಡಿದ್ದು, ಈ ಕಿರಿಯ ನಿರ್ದೇಶಕನ ಹಿರಿಯ ಪ್ರತಿಭೆ ದೇಶವ್ಯಾಪಿ ಗಮನಸೆಳೆದಿತ್ತು. ಆದರೆ ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೇರಿದೆ.
|