ಅಧಿಕಾರ ಹಸ್ತಾಂತರದ ದಿನಾಂಕ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಬಿಜೆಪಿ ರಾಷ್ಟ್ತ್ರೀಯ ಮುಖಂಡ ವೆಂಕಯ್ಯನಾಯ್ಡು ಬೆಂಗಳೂರಿಗೆ ಶನಿವಾರ ಆಗಮಿಸಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದು, ಅಧಿಕಾರ ಹಸ್ತಾಂತರದ ಗೊಂದಲ ಮುಂದುವರೆದಿದೆ. ಜೆಡಿಎಸ್ ಹಾಗೂ ಬಿಜೆಪಿ ರಹಸ್ಯ ಸಮಾಲೋಚನೆಗಳು ಪ್ರತ್ಯೇಕವಾಗಿ ನಡೆದಿದ್ದು, ಅಧಿಕಾರ ಹಸ್ತಾಂತರ ಕುರಿತು ಉಭಯ ಪಕ್ಷಗಳಲ್ಲೂ ಕೆಂಡ ಮುಚ್ಚಿದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ನೆಪದಲ್ಲಿ ಗುರುವಾರ ಸೇರಿದ್ದ ಸಭೆಯಲ್ಲಿ ಅಧಿಕಾರ ಹಸ್ತಾಂತರ ಕುರಿತೇ