ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅತುಲ್ 6 ದಿನ ಪೊಲೀಸ್ ವಶಕ್ಕೆ  Search similar articles
ಪದ್ಮಪ್ರಿಯಾ ಸಾವಿನ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರರಾಗಿರುವ ಅತುಲ್ ರಾವ್‌ರನ್ನು ಹೆಚ್ಚಿನ ತನಿಖೆಗಾಗಿ ಆರು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

ಮಂಗಳವಾರ ಇಲ್ಲಿನ ಸಿಜೆಎಂ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ಸಂದರ್ಭದಲ್ಲಿ ವಿಚಾರಣೆ ನಡೆಸಿದ ಬಳಿಕ ಈ ಆದೇಶವನ್ನು ಹೊರಡಿಸಲಾಗಿದೆ. ಅತುಲ್ ಅವರ ಆರೋಗ್ಯ ಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ತಿಳಿಸಲಾಗಿದೆ.

ಪದ್ಮಪ್ರಿಯಾ ಸಾವಿನ ಪ್ರಕರಣದಲ್ಲಿ ಅತುಲ್ ವಿರುದ್ಧ ಶಾಸಕ ರಘುಪತಿ ಭಟ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಅಪಹರಣ ಹಾಗೂ ಆತ್ಮಹತ್ಯೆ ಪ್ರಚೋದನೆ ಕೇಸು ದಾಖಲಾಗಿತ್ತು. ಈ ನಿಟ್ಟಿನಲ್ಲಿ ಇನ್ಸ್ಪೆಕ್ಟರ್ ಬಿ.ಜಿ. ಅಚಾರ್ ನೇತೃತ್ವದಲ್ಲಿ ಮಣಿಪಾಲ ಪೊಲೀಸರು ಅತುಲ್‌ನನ್ನು ಬಂಧಿಸಿ ಮಂಗಳೂರಿನಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇದೇ ತಿಂಗಳ 11ರಂದು ಮನೆ ಬಿಟ್ಟಿದ್ದ ಶಾಸಕರ ಪತ್ನಿ ಪದ್ಮಪ್ರಿಯಾ ಕಾಣೆಯಾಗಿದ್ದಾರೆ ಎಂದು 13ರಂದು ಶಾಸಕರ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದಾದ ಎರಡು ದಿನಗಳ ಬಳಿಕ ದೆಹಲಿಯ ಅಪಾರ್ಟ್ಮೆಂಟ್ ಒಂದರಲ್ಲಿ ಪದ್ಮಪ್ರಿಯಾ ಶವವಾಗಿ ಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡಿರುವ ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮತ್ತಷ್ಟು
ವಿಶೇಷ ಅಧಿವೇಶನಕ್ಕೆ ಕಾಶೆಂಪುರ್ ಆಗ್ರಹ
ಬಿಜೆಪಿಗೆ ಸಿದ್ದು ಅಗತ್ಯವಿಲ್ಲ: ಸದಾನಂದಗೌಡ
ಸದನದಲ್ಲಿ ಮುಗಿಯದ ರಸಗೊಬ್ಬರ ಗಲಾಟೆ
ಗೋಲಿಬಾರ್‌ಗೆ ಬಿಜೆಪಿ ಕಾರಣ: ಕುಮಾರಸ್ವಾಮಿ
ಅನನುಭವಿ ಮುಖ್ಯಮಂತ್ರಿ: ದೇವೇಗೌಡ
ಸದನದಲ್ಲಿ ಮೊಳಗಿದ ಗೋಲಿಬಾರ್