ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ವಿನಿವಿಂಕ್ ಶಾಸ್ತ್ರಿ' ಆಸ್ತಿ ಹಂಚಲು ಹೈಕೋರ್ಟ್ ಆದೇಶ  Search similar articles
ಸಾವಿರಾರು ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ವಿನಿವಿಂಕ್ ಸಂಸ್ಥೆ ಮತ್ತು ಅದರ ಮುಖ್ಯಸ್ಥರಿಗೆ ಸೇರಿದ ಸ್ಥಿರ ಮತ್ತು ಚರ ಆಸ್ತಿಗಳನ್ನು ಹರಾಜು ಹಾಕಿ ಅದರಿಂದ ಬರುವ ಹಣವನ್ನು ಠೇವಣಿದಾರರಿಗೆ ಆದ್ಯತೆ ಮೇಲೆ ಪಾವತಿಸುವಂತೆ ಸಿಓಡಿ ಮತ್ತು ಸಿವಿಲ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌‌‌ಗೆ ಹೈಕೋರ್ಟ್ ಅದೇಶಿಸಿದೆ.

ತಮಗೆ ಜಾಮೀನು ನಿರಾಕರಿಸಿದ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ವಿನಿವಿಂಕ್ ಸೌಹಾರ್ದ ಸಹಕಾರ ಸಂಘದ ಮುಖ್ಯಸ್ಥ ಕೆ.ಎನ್. ಶ್ರೀನಿವಾಸ ಶಾಸ್ತ್ರಿ ಮತ್ತು ನಿರ್ದೇಶಕ ಜಿ. ಲೋಕೇಶ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಹುಲುವಾಡಿ ಜಿ.ರಮೇಶ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ವಿನಿವಿಂಕ್ ಶಾಸ್ತ್ರಿಗೆ ಹಲವು ಕಡೆ ಜಮೀನು, ನಿವೇಶನಗಳಿದ್ದು ಇವುಗಳ ಮೌಲ್ಯ 88 ಕೋಟಿಯಷ್ಟಾಗಬಹುದು ಎಂದು ಅಂದಾಜಿಸಲಾಗಿದೆ. ವಿನಿವಿಂಕ್ ಮತ್ತು ಅದರ ಸಹ ಸಂಸ್ಥೆಗಳಲ್ಲಿ 20,154 ಮಂದಿ ಸುಮಾರು 203 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. ವಿನಿವಿಂಕ್ ಶಾಸ್ತ್ರಿ ಹೆಸರಿನಲ್ಲಿ ಹೊಸಕೋಟೆ ತಾಲೂಕು ಸೂಲಿಬೆಲೆಯಲ್ಲಿ 25 ಎಕರೆ ಜಮೀನು, ಇತರೆಡೆ 49 ನಿವೇಶನಗಳು ಸೇರಿದಂತೆ ಹಲವು ಆಸ್ತಿಗಳಿವೆ. ಇವೆಲ್ಲದರ ಮೊತ್ತ ಸುವಾರು 88 ಕೋಟಿಗಳಷ್ಟು ಎಂದು ಅಂದಾಜಿಸಲಾಗಿದೆ.

ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನ್ಯಾಯಪೀಠ, ಶಾಸ್ತ್ರಿ ಮತ್ತು ವಿನಿವಿಂಕ್ ಸಂಸ್ಥೆಗೆ ಸೇರಿದ ಎಲ್ಲ ಸ್ಥಿರ ಮತ್ತು ಚರ ಆಸ್ತಿಗಳನ್ನು ಹರಾಜು ಹಾಕಿ ಅದರಿಂದ ಬರುವ ಹಣ ವನ್ನು ಸಿವಿಲ್ ನ್ಯಾಯಲಯದ ರಿಜಿಸ್ಟ್ರಾರ್ ಹೆಸರಿನ ಖಾತೆಯಲ್ಲಿ ಭರ್ತಿ ಮಾಡಬೇಕು. ಈ ಹಣವನ್ನು ಠೇವಣಿದಾರರಿಗೆ ಹಂಚುವಾಗ ಆದ್ಯತೆ ಮೇಲೆ ಹಂಚಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.

ಏತನ್ಮಧ್ಯೆ ವಿನಿವಿಂಕ್ ಶಾಸ್ತ್ರಿ ಪರ ವಕೀಲ ಶಂಕರಪ್ಪ ಅವರು, ಠೇವಣಿದಾರರಿಗೆ ಸಂಬಂಧಿಸಿದಂತೆ ಈ ಹಿಂದೆ ಸಿಓಡಿ ಸಲ್ಲಿಸಿದ್ದ ಅರೋಪ ಪಟ್ಟಿಯಲ್ಲಿ ಇರುವ ಮಾಹಿತಿ ಮತ್ತು ಈಗ ನೀಡಿರುವ ಮಾಹಿತಿಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಆದ್ದರಿಂದ ಠೇವಣಿದಾರರ ಬಗ್ಗೆ ಸಿಓಡಿ ಸಲ್ಲಿಸಿರುವ ದಾಖಲೆಗಳ ಪ್ರತಿಯನ್ನು ಅರ್ಜಿದಾರರಿಗೂ ನೀಡಿದರೆ ಅದನ್ನು ಪರಿಶೀಲಿಸಿ ನಿಜವಾದ ಠೇವಣಿದಾರರಿಗೆ ಹಣ ಒದಗಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು. ಈ ಮನವಿಯನ್ನು ಪರಿಗಣಿಸಿದ ನ್ಯಾಯಪೀಠ ಅರ್ಜಿದಾರರಿಗೆ ಅಗತ್ಯ ದಾಖಲೆ ಒದಗಿಸುವಂತೆ ಸಿಓಡಿಗೆ ಸೂಚಿಸಿತು.
ಮತ್ತಷ್ಟು
ವಿಧಾನಸೌಧ ಸುತ್ತ ನಿಷೇಧಾಜ್ಞೆ
ಮದ್ಯಪಾನ ವಿರೋಧಿ ಸಮಿತಿ ಅಧ್ಯಕ್ಷನ ಕೊಲೆ
ಯಡಿಯೂರಪ್ಪ ವಿಮಾನಕ್ಕೆ ಹುಸಿ ಬಾಂಬ್ ಕರೆ
ಬೆಂಗಳೂರು: ವರುಣನ ಆರ್ಭಟಕ್ಕೆ 2 ಬಲಿ
ಪದ್ಮಪ್ರಿಯ ಪ್ರಕರಣ: ಅತುಲ್ ಜಾಮೀನು ತಿರಸ್ಕೃತ
ರಾಯಚೂರು ಬಂದ್‌‌ಗೆ ಮಿಶ್ರ ಪ್ರತಿಕ್ರಿಯೆ