ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೀವೇ ಕಸ ವಿಲೇವಾರಿ ಮಾಡಿ: ಹೋಟೇಲಿಗರಿಗೆ ಬಿಬಿಎಂಪಿ  Search similar articles
ಕಿಲೋ ಕಸಕ್ಕೆ ಒಂದು ರೂಪಾಯಿ ವಿಧಿಸಿರುವ ಬಿಬಿಎಂಪಿ ಕ್ರಮದ ವಿರುದ್ಧ ಹೋಟೆಲ್ ಸಂಘ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಬಿಬಿಎಂಪಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಹೋಟೆಲ್ ಹಾಗೂ ಕಲ್ಯಾಣ ಮಂಟಪಗಳು ತಾವೇ ಕಸ ವಿಲೇವಾರಿ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ನಿಗದಿತ ಶುಲ್ಕವನ್ನು ಹೆಚ್ಚು ಎನ್ನುವ ಸಂಸ್ಥೆಗಳು ತಾವು ಉತ್ಪಾದಿಸುವ ಕಸವನ್ನು ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಬಹುದು. ಸದ್ಯ ಮಾವಳ್ಳಿಪುರದಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಪ್ರತಿ ಕೆ.ಜಿ.ಗೆ 17 ಪೈಸೆಯಂತೆ ಶುಲ್ಕ ಪಡೆದು ಬಿಬಿಎಂಪಿ ಕಸ ವಿಲೇವಾರಿ ಮಾಡುತ್ತಿದೆ.

ಹಾಗೆಯೇ ಖಾಸಗಿ ಸಂಸ್ಥೆಗಳು ತಮ್ಮ ಖರ್ಚಿನಲ್ಲಿ ಸಂಸ್ಕರಣ ಘಟಕಗಗಳಿಗೆ ಕಸ ಸಾಗಣೆ ಮಾಡಬೇಕಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಬೀದಿಯಲ್ಲಿ ಕಸ ಹಾಕಲು ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಡಾ.ಎಸ್.ಸುಬ್ರಹ್ಮಣ್ಯ ಸ್ಪಷ್ಟಪಡಿಸಿದ್ದಾರೆ.

ಇದು ಹೋಟೆಲ್ ಮಾಲೀಕರನ್ನು ಮತ್ತೆ ಚಿಂತೆಗೀಡು ಮಾಡಿದ್ದು, ಮುಂದಿನ ಕಾರ್ಯತಂತ್ರಕ್ಕೆ ಹೋಟೆಲ್ ಮಾಲೀಕರ ಸಂಘ ಸಿದ್ಧತೆ ನಡೆಸುತ್ತಿದೆ.
ಮತ್ತಷ್ಟು
ಶಾಸ್ತ್ರೀಯ ಸ್ಥಾನಕ್ಕೆ ತಮಿಳರ ಅಡ್ಡಿ: ಚಿಮೂ
ವಿಮಾನ ನಿಲ್ದಾಣದ ಹೆಚ್ಚುವರಿ ಭೂಮಿ ಹರಾಜಿಗಿಲ್ಲ
ಶೀಘ್ರವೆ ಬರಪೀಡಿತ ಜಿಲ್ಲೆಗಳ ಘೋಷಣೆ
'ವಿನಿವಿಂಕ್ ಶಾಸ್ತ್ರಿ' ಆಸ್ತಿ ಹಂಚಲು ಹೈಕೋರ್ಟ್ ಆದೇಶ
ವಿಧಾನಸೌಧ ಸುತ್ತ ನಿಷೇಧಾಜ್ಞೆ
ಮದ್ಯಪಾನ ವಿರೋಧಿ ಸಮಿತಿ ಅಧ್ಯಕ್ಷನ ಕೊಲೆ