ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರತಿಪಕ್ಷಕ್ಕೆ ಶೀಘ್ರವೇ ಮುಖ್ಯಸಚೇತಕ ಹುದ್ದೆ  Search similar articles
ರಾಜ್ಯ ವಿಧಾನಸಭೆಯ ಪ್ರತಿಪಕ್ಷಕ್ಕೂ ರಾಜ್ಯ ಸಚಿವರ ಸ್ಥಾನಮಾನದ ಮುಖ್ಯ ಸಚೇತಕ ಹುದ್ದೆ ಶೀಘ್ರದಲ್ಲಿಯೇ ದೊರೆಯಲಿದ್ದು, ಆ ನಿಟ್ಟಿನಲ್ಲಿ ಪ್ರತಿಪಕ್ಷಕ್ಕೂ ಮುಖ್ಯ ಸಚೇತಕ ಹುದ್ದೆ ನೀಡಲು ಕರ್ನಾಟಕ ವಿಧಾನ ಸಭೆ ವೇತನ, ಭತ್ಯೆ, ಪಿಂಚಣಿ ಹಾಗೂ ವಿಶೇಷ ಭತ್ಯೆ ಕಾಯ್ದೆಗೆ ತಿದ್ದುಪಡಿಯನ್ನು ಬಿಜೆಪಿ ಸರ್ಕಾರ ಪ್ರಸ್ತುತ ಅಧಿವೇಶನದಲ್ಲೇ ಮಂಡಿಸುವ ಸಂಭವವಿದೆ.

ಪ್ರತಿಪಕ್ಷದಲ್ಲಿ ಮುಖ್ಯ ಸಚೇತಕ ಹುದ್ದೆ ಪಡೆಯುವವರು ವಾರ್ಷಿಕ ವೇತನ 96 ಸಾವಿರ ರೂ, ಮನೆ ಬಾಡಿಗೆ 3 ಲಕ್ಷ ರೂ. ಪ್ರಯಾಣ ಭತ್ಯೆ 16.64 ಲಕ್ಷ ರೂ, ಇಂಧನ ಭತ್ಯೆ 2,51,220 ರೂ, ಹಾಗೂ ವ್ಯಯ ನಿಯಂತ್ರಣ ಭತ್ಯೆಯಾಗಿ 50 ಸಾವಿರ ರೂ ಪಡೆಯಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಮೂಲಗಳು ತಿಳಿಸಿವೆ.

ಹೈದಾರಾಬಾದಿನಲ್ಲಿ ಇತ್ತೀಚೆಗೆ ನಡೆದ 13 ನೇ ಮುಖ್ಯ ಸಚೇತಕ ಸಮ್ಮೇಳನದಲ್ಲಿ ವಿರೋಧ ಪಕ್ಷಗಳಿಗೂ ಮುಖ್ಯ ಸಚೇತಕ ಹುದ್ದೆ ನೀಡಬೇಕೆಂದು ಶಿಫಾರಸು ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ನನ್ನ ಸಾವಿಗೆ ಶಿಕ್ಷಕರೇ ಕಾರಣ..
ನೀವೇ ಕಸ ವಿಲೇವಾರಿ ಮಾಡಿ: ಹೋಟೇಲಿಗರಿಗೆ ಬಿಬಿಎಂಪಿ
ಶಾಸ್ತ್ರೀಯ ಸ್ಥಾನಕ್ಕೆ ತಮಿಳರ ಅಡ್ಡಿ: ಚಿಮೂ
ವಿಮಾನ ನಿಲ್ದಾಣದ ಹೆಚ್ಚುವರಿ ಭೂಮಿ ಹರಾಜಿಗಿಲ್ಲ
ಶೀಘ್ರವೆ ಬರಪೀಡಿತ ಜಿಲ್ಲೆಗಳ ಘೋಷಣೆ
'ವಿನಿವಿಂಕ್ ಶಾಸ್ತ್ರಿ' ಆಸ್ತಿ ಹಂಚಲು ಹೈಕೋರ್ಟ್ ಆದೇಶ