ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಗಣ್ಯ'ರ ಸಂಚಾರ ಕಿರಿಕಿರಿಯಿಂದ ಸಾರ್ವಜನಿಕರಿಗೆ ಮುಕ್ತಿ  Search similar articles
ಮಂತ್ರಿಗಳು, ಸಚಿವರು ಸೇರಿದಂತೆ 'ಗಣ್ಯ' ವ್ಯಕ್ತಿಗಳ ಸಂಚಾರದ ಸಮಯದಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುವುದನ್ನು ತಪ್ಪಿಸುವ ಸಲುವಾಗಿ, ಇನ್ನು ಮುಂದೆ ಕೆಲವೇ ಕೆಲವು ಗಣ್ಯರಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಗರದ ಪೊಲೀಸ್ ಆಯುಕ್ತ ಶಂಕರಿ ಬಿದರಿ ತಿಳಿಸಿದ್ದಾರೆ.

ರಾಜ್ಯಪಾಲರು, ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಮಾಜಿ ಪ್ರಧಾನಿ ದೇವೇಗೌಡರನ್ನು ಹೊರತುಪಡಿಸಿ ರಾಜ್ಯದ ಇನ್ಯಾವುದೇ ಗಣ್ಯ ವ್ಯಕ್ತಿಗಳು ಸಂಚರಿಸುವಾಗ ಸಂಚಾರ ಸ್ಥಗಿತಗೊಳಿಸದಿರಲು ಇಲಾಖೆ ನಿರ್ಧರಿಸಿದೆ. ಇದರಿಂದ ಜನ ಸಾಮಾನ್ಯರು ಗಣ್ಯ ವ್ಯಕ್ತಿಗಳ ಕಿರಿಕಿರಿಯಿಂದ ಮುಕ್ತಿ ಪಡೆಯುವಂತಾಗಿದೆ.

ಗಣ್ಯ ವ್ಯಕ್ತಿಗಳ ಸಂಚಾರ ಸಮಯದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿದರಿ ವಿವರಿಸಿದ್ದು, ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಷ್ಟ್ರೀಯ ನಾಯಕರು ಹಾಗೂ ವಿದೇಶಿ ಗಣ್ಯರಿಗೆ ಸಂಚಾರ ತೆರವು ಸೌಲಭ್ಯ ಲಭ್ಯವಾಗುತ್ತದೆ ಎಂದರು.
ಮತ್ತಷ್ಟು
ಪ್ರತಿಪಕ್ಷಕ್ಕೆ ಶೀಘ್ರವೇ ಮುಖ್ಯಸಚೇತಕ ಹುದ್ದೆ
ಕಡಿಮೆ ಅಂಕ - ವಿದ್ಯಾರ್ಥಿನಿ ನೇಣಿಗೆ ಶರಣು
ನೀವೇ ಕಸ ವಿಲೇವಾರಿ ಮಾಡಿ: ಹೋಟೇಲಿಗರಿಗೆ ಬಿಬಿಎಂಪಿ
ಶಾಸ್ತ್ರೀಯ ಸ್ಥಾನಕ್ಕೆ ತಮಿಳರ ಅಡ್ಡಿ: ಚಿಮೂ
ವಿಮಾನ ನಿಲ್ದಾಣದ ಹೆಚ್ಚುವರಿ ಭೂಮಿ ಹರಾಜಿಗಿಲ್ಲ
ಶೀಘ್ರವೆ ಬರಪೀಡಿತ ಜಿಲ್ಲೆಗಳ ಘೋಷಣೆ