ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉ.ಕ. ರೈತರಿಗೆ ಸಂತಸ ತಂದ ವರ್ಷಧಾರೆ  Search similar articles
ಮಂಗಳವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ, ಮಳೆಯಿಲ್ಲದೇ ಕಂಗಲಾಗಿದ್ದ ಉತ್ತರ ಕರ್ನಾಟಕ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಧಾರವಾಡ, ಗದಗ, ಹಾವೇರಿ, ಬೆಳಗಾವಿ ಹಾಗೂ ಹುಬ್ಬಳ್ಳಿಗಳಲ್ಲಿ ಮಳೆಯಾಗಿದ್ದು, ಸುಮಾರು ಎರಡು ಗಂಟೆ ಅವಧಿಯಲ್ಲಿ 30 ಮಿ.ಮೀ ಮಳೆಯಾಗಿದೆ.

ಹುಬ್ಬಳ್ಳಿಯಲ್ಲಿ 30 ಮಿ.ಮೀ ಹಾಗೂ ಧಾರವಾಡದಲ್ಲಿ 35 ಮಿ.ಮೀ ಮಳೆಯಾಗಿದೆ. ಮಂಗಳವಾರ ಸಂಜೆ ಆರಂಭವಾದ ಮಳೆ ಕೆಲವು ನಿಮಿಷಗಳಲ್ಲಿ ಇಡೀ ನಗರ ವರ್ಷಧಾರೆಗೆ ತೊಯ್ದು ಹೋಗಿತ್ತು.

ಚರಂಡಿಗಳಲ್ಲಿ ನೀರು ತುಂಬಿ ಹರಿದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಯಿತು. ತಗ್ಗು ಪ್ರದೇಶಗಳ ಕೆಲವು ಮನೆಯೊಳಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಬಿತ್ತನೆ ಕಾರ್ಯಕ್ಕಾಗಿ ಮಳೆಯನ್ನು ಎದುರು ನೋಡುತ್ತಿದ್ದ ರೈತರಿಗೆ ಮಂಗಳವಾರ ಸುರಿದ ಮಳೆಯಿಂದಾಗಿ ಸಂತಸದ ನಿಟ್ಟುಸಿರು ಬಿಡುವಂತಾಗಿದೆ.
ಮತ್ತಷ್ಟು
'ಗಣ್ಯ'ರ ಸಂಚಾರ ಕಿರಿಕಿರಿಯಿಂದ ಸಾರ್ವಜನಿಕರಿಗೆ ಮುಕ್ತಿ
ಪ್ರತಿಪಕ್ಷಕ್ಕೆ ಶೀಘ್ರವೇ ಮುಖ್ಯಸಚೇತಕ ಹುದ್ದೆ
ಕಡಿಮೆ ಅಂಕ - ವಿದ್ಯಾರ್ಥಿನಿ ನೇಣಿಗೆ ಶರಣು
ನೀವೇ ಕಸ ವಿಲೇವಾರಿ ಮಾಡಿ: ಹೋಟೇಲಿಗರಿಗೆ ಬಿಬಿಎಂಪಿ
ಶಾಸ್ತ್ರೀಯ ಸ್ಥಾನಕ್ಕೆ ತಮಿಳರ ಅಡ್ಡಿ: ಚಿಮೂ
ವಿಮಾನ ನಿಲ್ದಾಣದ ಹೆಚ್ಚುವರಿ ಭೂಮಿ ಹರಾಜಿಗಿಲ್ಲ