ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಟ್ಟೆನೋವು: ತಾಯಿ-ಮಕ್ಕಳ ಆತ್ಮಹತ್ಯೆ  Search similar articles
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ತಾಯಿ ತನ್ನ ಮಕ್ಕಳಿಬ್ಬರೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚೊಕ್ಕನಹಳ್ಳಿಯಲ್ಲಿ ಬುಧವಾರ ಸಂಭವಿಸಿದೆ.

ಇಲ್ಲಿನ ಚೊಕ್ಕನಹಳ್ಳಿಯ ಮಹಿಳೆಯೊಬ್ಬರು ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ತಾನೊಬ್ಬಳೇ ಆತ್ಮಹತ್ಯೆ ಮಾಡಿಕೊಂಡರೆ ತನ್ನ ಮಕ್ಕಳಿಬ್ಬರು ಅನಾಥರಾಗುತ್ತಾ ರೆಂದು ಭಾವಿಸಿ, ತನ್ನಿಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಮೃತರ ವಿವರ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

ಈಗಾಗಲೇ ಕೆರೆಯಿಂದ ಎರಡು ಮೃತದೇಹವನ್ನು ಹೊರತೆಗೆಯಲಾಗಿದ್ದು, ಇನ್ನೊಂದು ಶವವನ್ನು ಮೇಲಕ್ಕೆತ್ತಲು ಅಗ್ನಿಶಾಮಕ ದಳಕ್ಕೆ ಕರೆ ನೀಡಲಾಗಿದೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಿಕರಿಗೆ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು
ಉ.ಕ. ರೈತರಿಗೆ ಸಂತಸ ತಂದ ವರ್ಷಧಾರೆ
'ಗಣ್ಯ'ರ ಸಂಚಾರ ಕಿರಿಕಿರಿಯಿಂದ ಸಾರ್ವಜನಿಕರಿಗೆ ಮುಕ್ತಿ
ಪ್ರತಿಪಕ್ಷಕ್ಕೆ ಶೀಘ್ರವೇ ಮುಖ್ಯಸಚೇತಕ ಹುದ್ದೆ
ಕಡಿಮೆ ಅಂಕ - ವಿದ್ಯಾರ್ಥಿನಿ ನೇಣಿಗೆ ಶರಣು
ನೀವೇ ಕಸ ವಿಲೇವಾರಿ ಮಾಡಿ: ಹೋಟೇಲಿಗರಿಗೆ ಬಿಬಿಎಂಪಿ
ಶಾಸ್ತ್ರೀಯ ಸ್ಥಾನಕ್ಕೆ ತಮಿಳರ ಅಡ್ಡಿ: ಚಿಮೂ