ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದಲ್ಲಿನ ವಿವಾದಿತ ಹೊಗೇನಕಲ್ ಯೋಜನೆ ಕುರಿತು ಮತ್ತೆ ಸರ್ವ ಪಕ್ಷ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ರಾತ್ರಿ ಮುಕ್ತಾಯಗೊಂಡ ಸರ್ವಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ.
ಹೊಗೇನಕಲ್ ವಿವಾದ, ಲೋಡ್‌ಶೆಡ್ಡಿಂಗ್ ಸೇರಿದಂತೆ ಹಲವಾರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಸಲುವಾಗಿ ಇಂದು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ವಪಕ್ಷ ಸಭೆಯನ್ನು ಕರೆದಿದ್ದು, ಸಭೆಯಲ್ಲಿ ಹೊಗೇನಕಲ್ ವಿವಾದದ ಕುರಿತು ಮತ್ತೆ ಸಭೆ ನಡೆಸುವುದಾಗಿ ಹೇಳಿದರು.
ಆದರೆ ಲೋಡ್ ಶೆಡ್ಡಿಂಗ್ ಎಷ್ಟು ಗಂಟೆ ಎಂಬ ಕುರಿತು ಸ್ಪಷ್ಟವಾಗಿ ನಿರ್ಧರಿಸಿಲ್ಲ, ಸಮಸ್ಯೆಗಳ ಕುರಿತ ಕರೆದ ಸಭೆಯಲ್ಲಿ ಯೂವುದೇ ನಿರ್ಣಯಕ್ಕೆ ಬಾರದೆ ಸಭೆ ಮುಕ್ತಾಯಗೊಂಡಿತ್ತು.
ಕಾಟಾಚಾರದ ಸಭೆ: ಸಮಸ್ಯೆಗಳ ಕುರಿತು ಚರ್ಚಿಸಲು ಕರೆದ ಸರ್ವಪಕ್ಷ ಸಭೆ ಕಾಟಾಚಾರಕ್ಕೆ ಕರೆದ ಸಭೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
|