ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಾಪ ಚುನಾವಣೆ: 7 ನಾಮಪತ್ರ ಸ್ವೀಕೃತ  Search similar articles
ಕನ್ನಡ ಸಾಹಿತ್ಯ ಪರಿಷತ್‌‌‌ನ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ಎಲ್ಲಾ ನಾಮಪತ್ರಗಳು ಸ್ವೀಕೃತಗೊಂಡಿದೆ ಎಂದು ಕಸಾಪ ಕೇಂದ್ರ ಚುನಾವಣಾಧಿಕಾರಿ ಕೆ. ನಾಗರಾಜು ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದವರಲ್ಲಿ ಡಾ. ನಲ್ಲೂರು ಪ್ರಸಾದ್, ಆರ್.ಕೆ., ಮಾ.ಚ. ಕೃಷ್ಣ, ಜಿ.ವಿ. ಪ್ರಭಾಕರ ರಾವ್, ಲಕ್ಷ್ಮಣ್ ರಾವ್ ಗೋಗಿ, ಡಾ| ಎಸ್. ವಿದ್ಯಾಶಂಕರ್ ಡಾ| ಸಿ.ವೀರಣ್ಣ ಪ್ರಮುಖರು. ನಾಮಪತ್ರ ಹಿಂತೆಗೆದುಕೊಳ್ಳಲು ಶನಿವಾರ ಕೊನೆಯ ದಿನವಾಗಿದೆ ಎಂದು ನಾಗರಾಜು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಅಲ್ಲದೇ, ಬೆಂಗಳೂರು ನಗರ ಜಿಲ್ಲಾ ಘಟಕ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ 13 ಮಂದಿಯಲ್ಲಿ ಒಬ್ಬರ ನಾಮಪತ್ರ ತಿರಸ್ಕೃತಗೊಂಡಿದೆ. ಉಳಿದಂತೆ 12 ಮಂದಿಯ ನಾಮಪತ್ರಗಳು ಅಂಗೀಕಾರವಾಗಿದೆ ಎಂದರು.

ಈ ನಡುವೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ಐದು ನಾಮಪತ್ರಗಳು ಸ್ವೀಕೃತಗೊಂಡಿದ್ದು, ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿದ ಬಳಿಕ ಅಂತಿಮ ಕಣದಲ್ಲಿರುವವರ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಮತ್ತಷ್ಟು
ಲೋಡ್ ಶೆಡ್ಡಿಂಗ್ ಅನಿವಾರ್ಯ: ಈಶ್ವರಪ್ಪ
ಹೊಗೇನಕಲ್ ಕುರಿತು ಮತ್ತೆ ಸರ್ವಪಕ್ಷ ಸಭೆ: ಸಿಎಂ
'ಅಡ್ಡ ಮತದಾನ' ಸಾಂಗ್ಲಿಯಾನ ವಿರುದ್ಧ ಆಕ್ರೋಶ
ಹೊಟ್ಟೆನೋವು: ತಾಯಿ-ಮಕ್ಕಳ ಆತ್ಮಹತ್ಯೆ
ಉ.ಕ. ರೈತರಿಗೆ ಸಂತಸ ತಂದ ವರ್ಷಧಾರೆ
'ಗಣ್ಯ'ರ ಸಂಚಾರ ಕಿರಿಕಿರಿಯಿಂದ ಸಾರ್ವಜನಿಕರಿಗೆ ಮುಕ್ತಿ