ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌‌ನಿಂದ ವಿಜಯೋತ್ಸವ - ಬಿಜೆಪಿ ಪ್ರತಿಭಟನೆ  Search similar articles
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಶ್ವಾಸಮತ ಗಳಿಸಿದ ಬಳಿಕ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರೆ, ಸರ್ಕಾರ ಬಿಜೆಪಿ ಸಂಸದರಿಗೆ ಹಣದ ಆಮಿಷ ಒಡ್ಡಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದಾರೆ.

ಮೈಸೂರಿನ ಉದಯಗಿರಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದ ಕಾಂಗ್ರೆಸ್ ಕಾರ್ಯಕರ್ತರು, ಪಟಾಕಿ ಸಿಡಿಸಿ ಸಿಹಿ ಹಂಚಿದರು. ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಯುಪಿಎ ವಿರುದ್ಧ ಘೋಷಣೆಗಳನ್ನು ಕೂಗಿ ಕೆ.ಆರ್. ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಅಂತೆಯೇ ಬೆಳಗಾವಿಯಲ್ಲಿಯೂ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ನಡುವೆ ಕೇಂದ್ರ ಸರ್ಕಾರದ ಪರ ಮತ ಚಲಾಯಿಸಿದ ಸಂಸದ ಮಂಜುನಾಥ ಕುನ್ನೂರು ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ಕಾಯರ್ಕಕರ್ತರು, ಶುಕ್ರವಾರದಂದು ಶಿಗ್ಗಾಂವಿ ಬಂದ್‌‌ಗೆ ಕರೆ ನೀಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ನಡೆಸಿದ್ದರೆ, ಬಿಜೆಪಿ ಪ್ರತಿಭಟನೆ ನಡೆಸಿರುವ ಕುರಿತು ವರದಿ ಬಂದಿದೆ.
ಮತ್ತಷ್ಟು
ಕಸಾಪ ಚುನಾವಣೆ: 7 ನಾಮಪತ್ರ ಸ್ವೀಕೃತ
ಲೋಡ್ ಶೆಡ್ಡಿಂಗ್ ಅನಿವಾರ್ಯ: ಈಶ್ವರಪ್ಪ
ಹೊಗೇನಕಲ್ ಕುರಿತು ಮತ್ತೆ ಸರ್ವಪಕ್ಷ ಸಭೆ: ಸಿಎಂ
'ಅಡ್ಡ ಮತದಾನ' ಸಾಂಗ್ಲಿಯಾನ ವಿರುದ್ಧ ಆಕ್ರೋಶ
ಹೊಟ್ಟೆನೋವು: ತಾಯಿ-ಮಕ್ಕಳ ಆತ್ಮಹತ್ಯೆ
ಉ.ಕ. ರೈತರಿಗೆ ಸಂತಸ ತಂದ ವರ್ಷಧಾರೆ