ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಸಗೊಬ್ಬರ: ಮತ್ತೆ ಭುಗಿಲೆದ್ದ ಹಿಂಸಾಚಾರ  Search similar articles
ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ಮತ್ತೆ ತಲೆದೋರಿದ್ದು, ರಸಗೊಬ್ಬರ ಸಮರ್ಪಕವಾಗಿ ದೊರೆತಿಲ್ಲ ಎಂದು ಆಕ್ರೋಶಗೊಂಡಿರುವ ರೈತರು ಗುರುವಾರ ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ರಸಗೊಬ್ಬರ ಪೂರೈಕೆಯಾಗದಿರುವ ಬಗ್ಗೆ ಆಕ್ರೋಶಗೊಂಡ ಸಾವಿರಾರು ರೈತರು ಬಸ್‌‌ಗೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ, ತಾಲೂಕಿನಲ್ಲಿ ಅಘೋಷಿತ ಬಂದ್‌‌ಗೆ ಕರೆ ನೀಡಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಈ ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ.

ರಸಗೊಬ್ಬರವನ್ನು ಪೂರೈಸುತ್ತಿದ್ದ ಸೇವಾ ಸಹಕಾರ ಮಳಿಗೆ ಕಳೆದ ಕೆಲವು ದಿನಗಳಿಂದ ರಸಗೊಬ್ಬರ ನೀಡುತ್ತಿದ್ದರೂ, ರಸಗೊಬ್ಬರ ದೊರೆಯದ ರೈತರು ರಸಗೊಬ್ಬರ ಪೂರೈಸುವ ಮಳಿಗೆಗೆ ದಾಳಿ ನಡೆಸಿ ರಸಗೊಬ್ಬರಗಳನ್ನು ಹೊತ್ತೊಯ್ದ ಘಟನೆ ಇದೇ ವೇಳೆ ನಡೆಯಿತು. ಜಿಲ್ಲೆಯ 6 ತಾಲೂಕುಗಳಲ್ಲಿ ರೈತರು ರಸಗೊಬ್ಬರಕ್ಕಾಗಿ ನಡೆಸಿದ ಪ್ರತಿಭಟನೆ ಇಂದು 10ನೇ ದಿನಕ್ಕೆ ಕಾಲಿಟ್ಟಿದೆ.
ಮತ್ತಷ್ಟು
ಕಾಂಗ್ರೆಸ್‌‌ನಿಂದ ವಿಜಯೋತ್ಸವ - ಬಿಜೆಪಿ ಪ್ರತಿಭಟನೆ
ಕಸಾಪ ಚುನಾವಣೆ: 7 ನಾಮಪತ್ರ ಸ್ವೀಕೃತ
ಲೋಡ್ ಶೆಡ್ಡಿಂಗ್ ಅನಿವಾರ್ಯ: ಈಶ್ವರಪ್ಪ
ಹೊಗೇನಕಲ್ ಕುರಿತು ಮತ್ತೆ ಸರ್ವಪಕ್ಷ ಸಭೆ: ಸಿಎಂ
'ಅಡ್ಡ ಮತದಾನ' ಸಾಂಗ್ಲಿಯಾನ ವಿರುದ್ಧ ಆಕ್ರೋಶ
ಹೊಟ್ಟೆನೋವು: ತಾಯಿ-ಮಕ್ಕಳ ಆತ್ಮಹತ್ಯೆ