ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಕಾಸರಗೋಡಿನ ಎಂ. ವ್ಯಾಸ (67ವ) ಅವರು ಬುಧವಾರ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಅವರು ಕಳೆದ ಒಂದು ತಿಂಗಳಿನಿಂದ ಚಿಕೂನ್ ಗುನ್ಯಾದಿಂದ ಬಳಲುತ್ತಿದ್ದು, ಬುಧವಾರ ಮಧ್ನಾಹ್ನ ಕಾಸರಗೋಡು ವಿದ್ಯಾನಗರದ ಖಾಸಗಿ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಹಾಕಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಸಭೆ,ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದ ಅವರು, ಕೃತ, ಕಂಬನಿ ಎಂಬ ಕಥಾ ಸಂಕಲನ, ಸುಳಿ, ಕ್ಷೇತ್ರ ಕವನ ಸಂಕಲನ ಹಾಗೂ ಸ್ನಾನ ಎಂಬ ಕಿರು ಕಾದಂಬರಿಯನ್ನೂ ಪ್ರಕಟಿಸಿದ್ದರು.
ನಾಡಿನ ಹೆಸರಾಂತ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಪಾಕ್ಷಿಕಗಳಲ್ಲಿ ವ್ಯಾಸರು 350ಕ್ಕೂ ಹೆಚ್ಚು ಕಥೆ ಸೇರಿದಂತೆ ಲೇಖನಗಳನ್ನು ಬರೆದಿದ್ದು, 250 ಬಿಡಿ ಕವನಗಳನ್ನು ಬರೆದಿದ್ದರು.
|