ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿಗೆ 'ತಿರುಗುಬಾಣ'ವಾದ ಪಕ್ಷಾಂತರ: ಖರ್ಗೆ  Search similar articles
NRB
ಕೇಂದ್ರದಲ್ಲಿ ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿರುವ ಸಂಸದರ ವಿರುದ್ಧ ಬಿಜೆಪಿ ಕೈಗೊಂಡಿರುವ ಕ್ರಮವನ್ನು ಟೀಕಿಸಿದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಹದಿನೈದು ದಿನಗಳ ಹಿಂದೆ ರಾಜ್ಯದಲ್ಲಿ ಮಾಡಿದ ಘನಕಾರ್ಯವಾದರೂ ಏನು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನಾಯಕರನ್ನು ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದ ಬಿಜೆಪಿ ತಂತ್ರ, ಇದೀಗ ಅವರಿಗೆ ತಿರುಗುಬಾಣವಾಗಿದೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ವಿದ್ಯುತ್ ಅಭಾವ ಗಮನಿಸಿಯಾದರೂ ಯಡಿಯೂರಪ್ಪ ತಮ್ಮ ಪಕ್ಷದ ಮುಖಂಡರಿಗೆ ಅಣು ಒಪ್ಪಂದದ ಅಗತ್ಯವನ್ನು ಮನವರಿಕೆ ಮಾಡಬೇಕಿತ್ತು ಎಂದು ತಿಳಿಸಿದ ಅವರು, ಯುಪಿಎ ತಮಗೆ ತಲಾ ಒಂದು ಕೋಟಿ ರೂ.ಗಳಷ್ಟು ಹಣದ ಆಮಿಷ ಒಡ್ಡಿತ್ತು ಎಂದು ಸಂಸತ್ತಿನಲ್ಲಿ ಮೂವರು ಬಿಜೆಪಿ ಸಂಸದರು ತೋರಿಸಿದ ನೋಟಿನ ಕಂತೆಯಲ್ಲಿ ಇದಿದ್ದು ಬರೀ ಒಂದು ಕೋಟಿ ರೂ.ಗಳು. ಇನ್ನೆರಡು ಕೋಟಿ ಎಲ್ಲ ಮಾಯವಾಗಿತ್ತು ಎಂದು ಪ್ರಶ್ನಿಸಿದರು.

ಇದೇ ವೇಳೆ ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ತಿಳಿಸಿರುವ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಖರ್ಗೆ, ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಆರರಿಂದ ಹತ್ತು ತಾಸುಗಳವರೆಗೆ ಲೋಡ್ ಶೆಡ್ಡಿಂಗ್ ನಡೆಸಲು ಮುಂದಾಗಿರುವ ಸರ್ಕಾರ, ರೈತರಿಗೆಲ್ಲಿ ಉಚಿತ ವಿದ್ಯುತ್ ನೀಡಲು ಸಾಧ್ಯ ಎಂದು ಟೀಕಿಸಿದರು.
ಮತ್ತಷ್ಟು
ಖ್ಯಾತ ಕಥೆಗಾರ ಎಂ.ವ್ಯಾಸ ವಿಧಿವಶ
ಮತ್ತೆ ಲೋಕಸಭೆಗೆ ಸ್ಪರ್ಧಿಸಲಾರೆ: ಮನೋರಮಾ
ರಸಗೊಬ್ಬರ: ಮತ್ತೆ ಭುಗಿಲೆದ್ದ ಹಿಂಸಾಚಾರ
ಕಾಂಗ್ರೆಸ್‌‌ನಿಂದ ವಿಜಯೋತ್ಸವ - ಬಿಜೆಪಿ ಪ್ರತಿಭಟನೆ
ಕಸಾಪ ಚುನಾವಣೆ: 7 ನಾಮಪತ್ರ ಸ್ವೀಕೃತ
ಲೋಡ್ ಶೆಡ್ಡಿಂಗ್ ಅನಿವಾರ್ಯ: ಈಶ್ವರಪ್ಪ