ಭಾರತೀಯ ಜನತಾ ಪಕ್ಷಕ್ಕೆ ಯಾವ ಕಾರಣಕ್ಕೂ ಸೇರಲ್ಲ, ನಾನು ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ ಎಂದು ಹಾಲಿ ಶಾಸಕ, ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದು, ಅಲ್ಲದೇ ತಾನು ಕೆಪಿಸಿಸಿ ಅಧ್ಯಕ್ಷ ಪದವಿಯ ಆಕಾಂಕ್ಷಿಯೂ ಅಲ್ಲ ಎಂದು ತಿಳಿಸಿದರು.
ಬಳ್ಳಾರಿಯಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಸಿದ್ದರಾಮಯ್ಯ ಅವರನ್ನು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಮಾತನಾಡಿದರು. ಗೌಡರ ವಿರುದ್ಧ ಆಕ್ರೋಶ: ಯಾವ ಸಂದರ್ಭದಲ್ಲೂ ದೇವೇಗೌಡ ಅವರನ್ನು ನಂಬಕ್ಕಾಗಲ್ಲ. ವಿಧಾನಪರಿಷತ್‌ನಲ್ಲಿ ಒಂದು ಸ್ಥಾನವನ್ನೂ ಗೆಲ್ಲಲಾಗದಿದ್ದಾಗ ಎರಡು ಸ್ಥಾನ ಬಿಟ್ಟು ಕೊಟ್ಟು ಕಾಂಗ್ರೆಸ್ ಮಾಡಿದ ಉಪಕಾರಕ್ಕೆ ಅವರು ಮಾಡಿದ್ದೇನು. ಲೋಕಸಭೆಯಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೇ ಕೈಕೊಟ್ರು. ಇದರಿಂದಲೇ ಗೊತ್ತಾಗುತ್ತೆ ಅವರು ಏನು ಅಂತ ಸಿದ್ದರಾಮಯ್ಯ ಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನಿಂದ ಸಹಾಯ ಪಡೆದ ಗೌಡರು ಈಗ ಯುಪಿಎ ವಿರುದ್ಧ ಮತ ಚಲಾಯಿಸಿ ಕಾಂಗ್ರೆಸ್‌ಗೆ ದ್ರೋಹ ಮಾಡಿದ್ದಾರೆ. ಅದ್ದರಿಂದ ಅವರನ್ನು ನಂಬುವುದು ಕಷ್ಟ ಎಂದು ಈಗ ಎಲ್ಲರಿಗೂ ತಿಳಿದಂತಾಗಿದೆ ಎಂದು ಗುಡುಗಿದರು.
|