ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣಿಗಾರಿಕೆ ವಿರುದ್ಧ ರೈತರ ಆಕ್ರೋಶ: ಜೆಸಿಬಿಗೆ ಬೆಂಕಿ  Search similar articles
ಬೇಡಿಕೆ ಈಡೇರಿಸದೆ ಗಣಿಗಾರಿಕೆ ಪುನರಾರಂಭಿಸಿದ್ದನ್ನು ವಿರೋಧಿಸಿದ ರೈತರು ಕೋಟ್ಯಂತರ ರೂ. ಮೌಲ್ಯದ ಯಂತ್ರೋಪಕರಣಗಳಿಗೆ ಬೆಂಕಿ ಹಚ್ಚಿರುವ ಘಟನೆ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಅಬ್ಬಿಗೆ ಗುಡ್ಡದಲ್ಲಿ ಬಿಗಿ ಬಂದೋ ಬಸ್ತ್‌‌ನಲ್ಲಿ ಗಣಿಗಾರಿಕೆ ಆರಂಭಿಸಿರುವ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ರೈತರು ಸುಮಾರು 2 ಸಾವಿರಕ್ಕೂ ಅಧಿಕ ರೈತರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ರೈತರನ್ನು ಚದುರಿಸಲು ಸಾಧ್ಯವಾಗದಿದ್ದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಲು ಮುಂದಾದಾಗ ರೊಚ್ಚಿಗೆದ್ದ ರೈತರು, ಗಣಿಗಾರಿಕೆಗೆ ಬಳಸುತ್ತಿದ್ದ ಜೆಸಿಬಿ, ಕ್ರೆಷರ್ ಸೇರಿದಂತೆ ಕೋಟ್ಯಂತರ ರೂ. ಮೌಲ್ಯದ ಯಂತ್ರೋಪಕರಣಗಳಿಗೆ ಬೆಂಕಿ ಹಚ್ಚಿದರು. ಗಣಿಗಾರಿಕೆ ನಡೆಸುವುದರಿಂದ ಅಡಿಕೆ, ತೆಂಗು ಮುಂತಾದ ಬೆಳೆಗಳಿಗೆ ಧೂಳು ತುಂಬಿ ಬೆಳೆ ನಾಶವಾಗುತ್ತಿದೆ ಎಂಬುದು ರೈತರ ಆರೋಪವಾಗಿದೆ.

ಈ ನಿಟ್ಟಿನಲ್ಲಿ ಕಳೆದ 15ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ರೈತರ ಬೇಡಿಕೆ ಈಡೇರಿದ ಬಳಿಕ ಮುಂದಿನ ತಿಂಗಳ 2ರಂದು ಗಣಿಗಾರಿಕೆ ಆರಂಭಿಸುವುದಾಗಿ ತಿಳಿಸಿದ್ದರು. ಆದರ ಈಗ ಏಕಾಏಕಿ ಗಣಿಗಾರಿಕೆ ಆರಂಭಿಸಿರುವುದರ ಬಗ್ಗೆ ಅಕ್ರೌಶಗೊಂಡ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಮತ್ತಷ್ಟು
ವಿಶ್ವಾಸದ್ರೋಹ - ಸಿಬಿಐ ತನಿಖೆ ನಡೆಯಲಿ: ಮನೋರಮಾ
ಗಂಡನ ಉಪಟಳ: ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ
ಬೆಂಗಳೂರಿನಲ್ಲಿ ಬ್ಯಾನರ್ - ಫ್ಲೆಕ್ಸ್‌ಗೆ ನಿಷೇಧ: ಸಿಎಂ
ಉದ್ಯಾನ ನಗರಿಯಲ್ಲಿ ' ರೆಡ್ ರಿಬ್ಬನ್ ' ರೈಲು
ಬಿಜೆಪಿ ಸೇರಲ್ಲ: ಸಿದ್ದರಾಮಯ್ಯ
ಬಾಬಾ ಪವಾಡ: ' ಜನಮರುಳೋ - ಜಾತ್ರೆಮರುಳೋ '