ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಿನಲ್ಲಿ ರೆಡ್ ಅಲರ್ಟ್ - ಆತಂಕದಲ್ಲಿ ಜನತೆ  Search similar articles
ಸರಣಿ ಬಾಂಬ್ ಸ್ಫೋಟಗಳಿಂದ ಉದ್ಯಾನ ನಗರಿ ತತ್ತರಗೊಂಡಿದ್ದು, ಜನತೆಯಲ್ಲಿ ಆತಂಕದ ಛಾಯೆಗೆ ಕಾರಣವಾಗಿದೆ. ನಗರದ ವಿವಿಧೆಡೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮೊಬೈಲ್ ಫೋನ್ ಸಹಾಯದಿಂದ ಸ್ಫೋಟ ನಡೆಸಿದ ಬಗ್ಗೆ ಪ್ರಾಥಮಿಕ ತನಿಖೆಯಿಂದ ಮಾಹಿತಿ ಲಭ್ಯವಾಗಿದೆ.

ನಗರದ ಮಡಿವಾಳ, ನಾಯಂಡನಹಳ್ಳಿ, ರಿಚ್ಮಂಡ್ ರಸ್ತೆ, ಮಲ್ಯ ಹಾಸ್ಪಿಟಲ್ ಸೇರಿದಂತೆ ಸದಾ ಜನನಿಬಿಡವಾಗಿರುವ ಪ್ರದೇಶದಲ್ಲಿ ಸ್ಫೋಟಗೊಂಡಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ. ಐಟಿ ಪ್ರದೇಶವಾದ ಎಲೆಕ್ಟ್ರಾನಿಕ್ ಸಿಟಿ ಸನಿಹದಲ್ಲೇ ಮಡಿವಾಳ ಚೆಕ್‌‌ಪೋಸ್ಟ್ ಬಳಿಯೂ ಬಾಂಬ್ ಸ್ಫೋಟ ನಡೆದಿರುವುದು ಐಟಿ ಮಂದಿಯಲ್ಲೂ ಆತಂಕ ಮನೆಮಾಡಿದೆ.

ಮೊಬೈಲ್ ಸಂಪರ್ಕಗಳನ್ನು ನಗರದೆಲ್ಲೆಡೆ ಕಡಿತಗೊಳಿಸಲಾಗಿದೆ. ದೂರವಾಣಿ ಸಂಪರ್ಕದಲ್ಲೂ ವ್ಯತ್ಯಯವಾಗಿದ್ದು, ಸ್ಫೋಟ ನಡೆದ ಸ್ಥಳಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.

ಈ ಸರಣಿ ಸ್ಫೋಟಕ್ಕೆ ಲಷ್ಕರ್-ಎ-ತೊಯ್ಬಾ ಸಂಘಟನೆ ಕಾರಣವಾಗಿರಬಹುದು ಎಂಬ ಶಂಕೆ ಪೊಲೀಸ್ ಮೂಲಗಳಿಂದ ವ್ಯಕ್ತವಾಗಿದ್ದು, ವಿಧಾನಸೌಧ, ಹೈಕೋರ್ಟ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ.
ಮತ್ತಷ್ಟು
ಜನ ಆತಂಕ ಪಡುವ ಅಗತ್ಯವಿಲ್ಲ: ಬಿದರಿ
ಬಾಂಬ್ ಸ್ಫೋಟದ ಹಿಂದೆ ಸಿಮಿ ಕೈವಾಡ ?
ಬೆಂಗಳೂರು: ಏಳು ಕಡೆಗಳಲ್ಲಿ ಸ್ಫೋಟ, 1 ಸಾವು
ಬಾಬು ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಮೇಧಾ ಆಗ್ರಹ
ವರುಣನ 'ವಕ್ರದೃಷ್ಟಿ' - ದೆಹಲಿಗೆ ನಿಯೋಗ
ಕೆಪಿಸಿಸಿಗೆ ಶೀಘ್ರವೇ ಅಧ್ಯಕ್ಷರ ನೇಮಕ: ಖರ್ಗೆ