ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಮರನಾಥ್ ವಿವಾದ: 11 ರಿಂದ ರಾಜ್ಯದಲ್ಲಿ ಜೈಲ್‌‌ ಭರೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮರನಾಥ್ ವಿವಾದ: 11 ರಿಂದ ರಾಜ್ಯದಲ್ಲಿ ಜೈಲ್‌‌ ಭರೋ
ಜಮ್ಮು ಮತ್ತು ಕಾಶ್ಮಿರದಲ್ಲಿ ಅಮರನಾಥ ಯಾತ್ರಾರ್ಥಿಗಳ ಅನುಕೂಲಕ್ಕೆಂದು ದೇವಾಲಯದ ಮಂಡಳಿಗೆ ನೀಡಲಾಗಿದ್ದ ಜಮೀನನ್ನು ಹಿಂದಕ್ಕೆ ಪಡೆದಿರುವುದನ್ನು ವಿರೋಧಿಸಿ ನಡೆದಿರುವ ಪ್ರತಿಭಟನೆಗೆ ರಾಜ್ಯ ಬಿಜೆಪಿ ಘಟಕ ಬೆಂಬಲ ಸೂಚಿಸಿದೆ.

ಈ ಸಂಬಂಧ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಇದೇ ತಿಂಗಳ 11 ರಿಂದ 13ರವರೆಗೆ ರಾಜ್ಯಾದ್ಯಂತ ಜೈಲ್‌‌ ಭರೋ ಮತ್ತು ರಾಜಭವನ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಸಿ.ಟಿ.ರವಿ ತಿಳಿಸಿದ್ದಾರೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರ ಸರ್ಕಾರ ಹಾಗೂ ಕೇಂದ್ರದ ಯುಪಿಎ ಸರ್ಕಾರ ಹಿಂದೂ ಭಾವನೆಯನ್ನು ಕೆರಳಿಸುವಂತಹ ನಿಲುವು ತಳೆಯುತ್ತಿವೆ ಎಂದು ಆರೋಪಿಸಿದರು.

ಹಿಂದೂ ಭಕ್ತಾದಿಗಳ ಸೌಲಭ್ಯಕ್ಕೆಂದು ಭೂಮಿ ಕೊಡುವುದೇ ಅಪರಾಧ ಎಂದು ಭಾವಿಸುವುದಾದರೆ, ಈ ನಿಲುವು ಇತರೆ ಧರ್ಮಿಯವರಿಗೂ ಅನ್ವಯ ಆಗಬೇಕೆಂದು ಅವರು ಆಗ್ರಹಿಸಿದರು.
ಮತ್ತಷ್ಟು
ಗಣಿಗಾರಿಕೆ ರಾಷ್ಟ್ರೀಕರಣಕ್ಕೆ ಹೈಕೋರ್ಟ್ ಸೂಚನೆ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ-ತಮಿಳುನಾಡು ಅಡ್ಡಗಾಲು
ಗೊಬ್ಬರ ಖರೀದಿ: ರೈತರಿಗೆ 1 ಸಾವಿರ ಸಹಾಯಧನ
ಸರಣಿ ಸ್ಫೋಟ: ತನಿಖೆ ಚುರುಕು-ಪ್ರಗತಿ ಶೂನ್ಯ
ಬಜೆಟ್‌‌: ಯೋಜನೆ ಅನುಷ್ಠಾನಕ್ಕೆ ಸಿಎಂ ತಾಕೀತು
ಲೋಕಾಯುಕ್ತ ದಾಳಿ: ಕೋಟ್ಯಂತರ ರೂ.ಆಸ್ತಿ ಪತ್ತೆ