ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದಿನಕರನ್ ಹೈಕೋರ್ಟ್ ನೂತನ ಮುಖ್ಯನ್ಯಾಯಮೂರ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಿನಕರನ್ ಹೈಕೋರ್ಟ್ ನೂತನ ಮುಖ್ಯನ್ಯಾಯಮೂರ್ತಿ
ಬೆಂಗಳೂರು: ರಾಜ್ಯ ಹೈಕೋರ್ಟ್‌‌ನ 25ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಪಾಲ್ ಡೇನಿಯಲ್ ದಿನಕರನ್ ಕುಮಾರ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ರಾಮೇಶ್ವರ್ ಠಾಕೂರ್ ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿ ನೂತನ ನ್ಯಾಯಮೂರ್ತಿಗಳನ್ನು ಅಭಿನಂದಿಸಿದರು.

ರಾಜ್ಯ ಹೈಕೋರ್ಟ್‌‌ ಮುಖ್ಯ ನ್ಯಾಯಧೀಶರಾಗಿದ್ದ ಸಿರಿಯಾಕ್ ಜೋಸೆಫ್ ಅವರು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡ ಬಳಿಕ ಅವರ ಸ್ಥಾನಕ್ಕೆ ಡ್ಯಾನ್ಯುಯಲ್ ಆಯ್ಕೆಯಾಗಿದ್ದಾರೆ. ಇವರು ಮೂಲತಃ ತಮಿಳುನಾಡಿವರಾಗಿದ್ದು, ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಗಳಿಸಿದ್ದಾರೆ. ಬಳಿಕ 1992ರಲ್ಲಿ ಕೇಂದ್ರ ಸರ್ಕಾರದ ಪರ ವಕೀಲರಾಗಿ ಸೇವೆ ಸಲ್ಲಿಸಿದ ಅವರು, 1996ರಲ್ಲಿ ಮದ್ರಾಸ್ ಹೈಕೋರ್ಟ್‌‌ನ ನ್ಯಾಯಧೀಶರಾಗಿ ನೇಮಕಗೊಂಡಿದ್ದರು.
ಮತ್ತಷ್ಟು
ನೈಸ್ -ಪ್ರತಿರೋಧ ಎದುರಿಸಲು ಸಿದ್ಧ:ಸಿಎಂ
ಗಣಿ-ಹೈಕೋರ್ಟ್ ತೀರ್ಪು ಪರಿಗಣಿಸಿ:ನಾಣಯ್ಯ
ಬೆಂಗಳೂರು: ಮತ್ತೆ ಸಿಡಿದ ಬಾಂಬ್ ?
ಗಣಿಗಾರಿಕೆ-ಹೈಕೋರ್ಟ್ ತೀರ್ಪಿಗೆ ಬದ್ದ: ಸಿಎಂ
ನೈಸ್:ನಂದಿಗ್ರಾಮದ ರೀತಿ ಹೋರಾಟ -ಎಚ್‌ಡಿಕೆ
ಅಮರನಾಥ್ ವಿವಾದ: 11 ರಿಂದ ರಾಜ್ಯದಲ್ಲಿ ಜೈಲ್‌‌ ಭರೋ