ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಖ್ಯಾತ ನಿರ್ದೇಶಕ ಕೆ.ವಿ.ಜಯರಾಂ ಇನ್ನಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಖ್ಯಾತ ನಿರ್ದೇಶಕ ಕೆ.ವಿ.ಜಯರಾಂ ಇನ್ನಿಲ್ಲ
ಕನ್ನಡ ಚಿತ್ರರಂಗದ ಖ್ಯಾತ ಚಿತ್ರ ನಿರ್ದೇಶಕ ಕೆ.ವಿ. ಜಯರಾಮ್(58) ಅವರು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ, ಅವರು ಬೆಂಗಳೂ ರಿನ ಸ್ವಗೃಹದಲ್ಲಿ ಮೃತಪಟ್ಟಿದ್ದು,ಅವರು ಕೆಲ ಕಾಲದಿಂದ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರು.

ಜಯರಾಮ್ ಅವರು ಜನಪ್ರಿಯ ಚಿತ್ರಗಳಾದ ಮುದುಡಿದ ತಾವರೆ, ಅರುಣರಾಗ, ಇಬ್ಬನಿ ಕರಗಿತು, ರಂಜಿತ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.

ಕನ್ನಡ ಚಿತ್ರರಂಗದಲ್ಲಿ 20ಕ್ಕೂ ಅಧಿಕ ಚಲನಚಿತ್ರಗಳನ್ನು ನಿರ್ದೇಶಿಸಿದ್ದ ಕೆ.ವಿ.ಜಯರಾಮ್ ಅವರ ರಂಜಿತಾ ಚಿತ್ರ ರಾಷ್ಟ್ರ ಪ್ರಶಸ್ತಿ ಗಳಿಸಿತ್ತು. ಅಲ್ಲದೇ 2001-01ನೇ ಸಾಲಿನ ಎಸ್.ಆರ್.ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೂ ಭಾಜನರಾಗಿದ್ದರು.

ಕನ್ನಡ ಚಿತ್ರರಂಗಕ್ಕಾಗಿ ದುಡಿದ ಹಾಗೂ ಉತ್ತಮ ಚಿತ್ರಗಳನ್ನು ಕೊಟ್ಟ ಕೆ.ವಿ.ಜಯರಾಮ್ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷೆ ಜಯಮಾಲಾ ಸೇರಿದಂತೆ ಹಲವಾರು ನಟರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಪ್ರವಾಹ-ವೈಮಾನಿಕ ಸಮೀಕ್ಷೆಗೆ ಸೂಚನೆ: ಸಿಎಂ
ಕೇಂದ್ರದ ಇಬ್ಬಗೆ ನೀತಿಗೆ ಬೊಮ್ಮಾಯ್ ಆಕ್ರೋಶ
ರಾಜ್ಯದ ಎಲ್ಲ ವಿವಿಗಳಲ್ಲಿ ಏಕರೂಪ ವೇಳಾಪಟ್ಟಿ ?
ಚುನಾವಣೆ-ಬಿಜೆಪಿಗೆ ಗೆಲುವು ಖಚಿತ:ಗೌಡ
'ನಂದಿನಿ' ಬೆಲೆ 2ರೂ.ತುಟ್ಟಿ ?
ಜನತಾದರ್ಶನ ಇಲ್ಲ, ಜಿಲ್ಲಾ ಕೇಂದ್ರದಲ್ಲೇ ಸಭೆ: ಸಿಎಂ