ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕನ್ನಡಕ್ಕಾಗಿ ಜೀವನವೇ ಮುಡಿಪು: ನಲ್ಲೂರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡಕ್ಕಾಗಿ ಜೀವನವೇ ಮುಡಿಪು: ನಲ್ಲೂರು
ಕನ್ನಡ ನಾಡು ಹಾಗೂ ನುಡಿಯ ಏಳಿಗೆಗಾಗಿ ಇಡೀ ಜೀವನನ್ನೇ ಮೀಸಲಿಡುವುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಡಾ. ಕೆ.ಆರ್. ನಲ್ಲೂರು ಪ್ರಸಾದ್ ತಿಳಿ ಸಿದ್ದಾರೆ.

ಕಸಾಪದ 23ನೇ ಅಧ್ಯಕ್ಷರಾಗಿ ಬುಧವಾರ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, ಗಾಂಧೀಜಿಯವರ ತತ್ವ ಹಾಗೂ ಆದರ್ಶಗಳಿಂದ ಪ್ರೇರಿತನಾಗಿದ್ದು, ಅವರ ತತ್ವಾದರ್ಶಗಳ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಅನ್ನು ಮುನ್ನಡೆಸುವುದಾಗಿ ತಿಳಿಸಿದರು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ ಅವರು, ಎಲ್ಲರೂ ಸೇರಿ ಕನ್ನಡಕ್ಕೆ ನ್ಯಾಯ ತಂದುಕೊಡಬೇಕಾದ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ತಿಳಿಸಿದರು.

ಅಂತೆಯೇ, ಕನ್ನಡಕ್ಕೆ ಸೂಕ್ತ ಸ್ಥಾನಮಾನ ನೀಡುವ ಕುರಿತು ರಾಜ್ಯದ ಎಲ್ಲಾ ಸಂಸದರೊಂದಿಗೆ ಚರ್ಚೆ ನಡೆಸುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಇಂದು ನಡೆದ ಸರಳ ಸಮಾರಂಭದಲ್ಲಿ ಆಡಳಿತಾಧಿಕಾರಿ ಮನು ಬಳಿಗಾರ್ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಸಾಪದ ಮಾಜಿ ಅಧ್ಯ ಕ್ಷ ಚಂದ್ರಶೇಖರ್ ಪಾಟೀಲ್, ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಉಪಸ್ಥಿತರಿದ್ದರು.
ಮತ್ತಷ್ಟು
ಸಚಿವರಾಗಿ ಉಮೇಶ್ ಕತ್ತಿ ಪ್ರಮಾಣ ವಚನ
ಅಮೃತ್ ಮಹಲ್ ಹಸ್ತಾಂತರಿಸಿದರೆ ಹೋರಾಟ: ದೇವೇಗೌಡ
ಅಮೆರಿಕ ಪ್ರವಾಸಕ್ಕೆ ಶಾಸಕರ ದಂಡು ಸಜ್ಜು
ಯಡಿಯೂರಪ್ಪ ಸಚಿವ ಸಂಪುಟ ಸಾಮೂಹಿಕ ನೇತ್ರದಾನ
ಉಪಚುನಾವಣೆ: ಜೆಡಿಎಸ್ ವೀಕ್ಷಕರ ನೇಮಕ
ಬಿಜೆಪಿ ವಿರುದ್ಧ ಉಗ್ರಪ್ಪ ಕಿಡಿ