ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚುನಾವಣೆಗೆ ಲೂಟಿ ಮಾಡಿದ ಹಣ ಬಳಕೆ:ದೇವೇಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆಗೆ ಲೂಟಿ ಮಾಡಿದ ಹಣ ಬಳಕೆ:ದೇವೇಗೌಡ
ರಾಜ್ಯದಲ್ಲಿ ಅಧಿಕಾರ ಪಡೆಯುವ ಮೂಲಕ ಬಿಜೆಪಿ ಲೂಟಿ ಮಾಡಿದ ಹಣವನ್ನು ಚುನಾವಣೆಗೆ ಬಳಸುತ್ತಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಕಟುವಾಗಿ ಆರೋಪಿಸಿದ್ದಾರೆ.

ತುರುವೆಕೆರೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಬೊಕ್ಕಸವನ್ನು ಖಾಲಿ ಮಾಡುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವಕ್ಕೆ ಅಪವಾದವೆಸಗಿದೆ ಎಂದು ದೂರಿದರು.

ಇದೇ ವೇಳೆ ತುರುವೆಕೆರೆ ಕ್ಷೇತ್ರದಿಂದ ಜೆಡಿಎಸ್‌‌ನಿಂದ ಕಣಕ್ಕಿಳಿಯುವ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಅವರು, ತುರುವೇಕೆರೆಯಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗೆ ಜೆಡಿಎಸ್‌‌ನಿಂದ ಎಂ.ಟಿ. ಕೃಷ್ಣಪ್ಪ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

ಈ ಕ್ಷೇತ್ರದಲ್ಲಿ ಜೆಡಿಎಸ್ ಸಾರ್ವಭೌಮತ್ವ ಪಡೆಯುವ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ದುಡಿಯಬೇಕೆಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಮತ್ತಷ್ಟು
ಕನ್ನಡಕ್ಕಾಗಿ ಜೀವನವೇ ಮುಡಿಪು: ನಲ್ಲೂರು
ಸಚಿವರಾಗಿ ಉಮೇಶ್ ಕತ್ತಿ ಪ್ರಮಾಣ ವಚನ
ಅಮೃತ್ ಮಹಲ್ ಹಸ್ತಾಂತರಿಸಿದರೆ ಹೋರಾಟ: ದೇವೇಗೌಡ
ಅಮೆರಿಕ ಪ್ರವಾಸಕ್ಕೆ ಶಾಸಕರ ದಂಡು ಸಜ್ಜು
ಯಡಿಯೂರಪ್ಪ ಸಚಿವ ಸಂಪುಟ ಸಾಮೂಹಿಕ ನೇತ್ರದಾನ
ಉಪಚುನಾವಣೆ: ಜೆಡಿಎಸ್ ವೀಕ್ಷಕರ ನೇಮಕ