ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಜಾಪುರ: ಉಷ್ಣ ವಿದ್ಯುತ್ ಸ್ಥಾಪನೆಗೆ ರೈತರ ವಿರೋಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜಾಪುರ: ಉಷ್ಣ ವಿದ್ಯುತ್ ಸ್ಥಾಪನೆಗೆ ರೈತರ ವಿರೋಧ
ಜಿಲ್ಲೆಯ ಕೊಡಗಿ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರಕ್ಕೆ ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿರುವ ಘಟನೆ ಬುಧವಾರ ನಡೆದಿದೆ.

ಈ ಹಿನ್ನೆಲೆಯಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ರೈತರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಕೇಂದ್ರದ 20 ಅಧಿಕಾರಿಗಳ ತಂಡ ಉಷ್ಣ ಸ್ಥಾವರ ಸ್ಥಾಪನೆಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆಗೆ ಆಗಮಿಸಿದ ಸಂದರ್ಭದಲ್ಲಿ ಇದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ರೈತರ ಮನವೊಲಿಕೆಗೆ ಅಧಿಕಾರಿಗಳು ಪ್ರಯತ್ನ ಪಟ್ಟರೂ ಅದು ಫಲಕಾರಿಯಾಗಿಲ್ಲ. ಉಷ್ಣ ವಿದ್ಯುತ್ ಸ್ಥಾವರವನ್ನು ನಿರುಪಯುಕ್ತ ಭೂಮಿಯಲ್ಲಿ ನಡೆಸಬೇಕು ವಿನಃ ರೈತರ ಭೂಮಿಯಲ್ಲಲ್ಲ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಉಷ್ಣ ವಿದ್ಯುತ್ ಸ್ಥಾವರದಿಂದ ರೈತರ ಭೂ ಕಬಳಿಕೆ ಆಗುವುದಾದರೆ ವಿದ್ಯುತ್ ಸ್ಥಾವರದ ಅಗತ್ಯ ರೈತರಿಗಿಲ್ಲ ಎಂದು ಪ್ರತಿಭಟಿಸಿದ ರೈತರನ್ನು ಕೊನೆಗೂ ಸಮಾಧಾನ ಪಡಿಸಿದ ಅಧಿಕಾರಿಗಳು, ಉಷ್ಣ ವಿದ್ಯುತ್ ಸ್ಥಾವರವನ್ನು ರೈಲ್ವೆ ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಆ ಜಾಗದಲ್ಲಿ ಯಾವುದೇ ರೈತರ ಭೂಮಿ ಬರುವುದಿಲ್ಲ ಎಂದು ವಿವರಣೆ ನೀಡಿದ್ದಾರೆ. ಬಳಿಕ ರೈತರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡರು.
ಮತ್ತಷ್ಟು
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ
ಚುನಾವಣೆಗೆ ಲೂಟಿ ಮಾಡಿದ ಹಣ ಬಳಕೆ:ದೇವೇಗೌಡ
ಕನ್ನಡಕ್ಕಾಗಿ ಜೀವನವೇ ಮುಡಿಪು: ನಲ್ಲೂರು
ಸಚಿವರಾಗಿ ಉಮೇಶ್ ಕತ್ತಿ ಪ್ರಮಾಣ ವಚನ
ಅಮೃತ್ ಮಹಲ್ ಹಸ್ತಾಂತರಿಸಿದರೆ ಹೋರಾಟ: ದೇವೇಗೌಡ
ಅಮೆರಿಕ ಪ್ರವಾಸಕ್ಕೆ ಶಾಸಕರ ದಂಡು ಸಜ್ಜು