ವಿನಿವಿಂಕ್ ಹಣಕಾಸಿನ ಸಂಸ್ಥೆಯಲ್ಲಿ ಠೇವಣೆ ಇಟ್ಟು ವಂಚನೆಗೊಳಗಾಗಿರುವ 146ಜನರಿಗೆ ಗ್ರಾಹಕರ ವೇದಿಕೆಯ ತೀರ್ಪಿನ ಪ್ರಕಾರ 2.46 ಕೋಟಿ ರೂ.ಹಣ ಪಾವತಿಸುವಂತೆ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ.
ರಾಯಚೂರಿನ ಗ್ರಾಹಕರ ವೇದಿಕೆಯ ವಕೀಲ ಶ್ರೀಪಾದ ಅವರು ಕಳೆದ ವಾರ ಹೈಕೋರ್ಟ್ ನೀಡಿದ ತೀರ್ಪು ಆಕ್ಷೇಪಿಸಿ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ತಕರಾರು ಅರ್ಜಿ ಇತ್ಯರ್ಥಪಡಿಸಿ ಹೈಕೋರ್ಟ್ ನ್ಯಾಯಾಧೀಶರಾದ ಕೆ.ರಮೇಶ್ ಅವರು ಈ ತೀರ್ಪು ನೀಡಿದ್ದಾರೆ.
ವಿನಿವಿಂಕ್ ಶಾಸ್ತ್ರಿ ಪ್ರಕರಣದಲ್ಲಿ ಸಿಓಡಿ ಪೊಲೀಸರು ವಶಪಡಿಸಿಕೊಂಡಿರುವ ಆಸ್ತಿ ಹಣದಲ್ಲಿ ಶೇ.5ರಷ್ಟು ವಾಪಸ್ ಮಾಡಲು ಹೈಕೋರ್ಟ್ ಕಳೆದ ವಾರ ತೀರ್ಪು ನೀಡಿದ್ದನ್ನು ಪ್ರಶ್ನಿಸಿ ವಕೀಲ ಶ್ರೀಪಾದ ಅವರು ರಾಯಚೂರು 146 ಗ್ರಾಹಕರ ಪರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದನ್ನು ವಿಚಾರಣೆ ನಡೆಸಿ ಈ ತೀರ್ಪು ನೀಡಲಾಗಿದೆ.
ಬೆಂಗಳೂರು ಸೇರಿದಂತೆ ಇತರೆ ಗ್ರಾಹಕರಿಗೆ ನೀಡಬೇಕಾದ ಠೇವಣಿ ಹಣದ ಬಗ್ಗೆ ನ್ಯಾಯಾಲಯ ಇನ್ನೂ ತೀರ್ಮಾನ ಕೈಗೊಳ್ಳಬೇಕಾಗಿದೆ.
|