ಚಿಕ್ಕಮಗಳೂರಿನ ದತ್ತಪೀಠದಲ್ಲಿ ಅಕ್ಟೋಬರ್ 19ರಂದು ದತ್ತಮಾಲಾ ಅಭಿಯಾನ ನಡೆಯಲಿದೆ ಎಂದು ಬಜರಂಗ ದಳದ ಮೂಲಗಳು ತಿಳಿಸಿವೆ.
ಬಜರಂಗ ದಳ ನೇತೃತ್ವದಲ್ಲಿ 9ನೇ ವರ್ಷದ ದತ್ತಮಾಲಾ ಅಭಿಯಾನ ಅಕ್ಟೋಬರ್ 13 ರಿಂದ 19ರವರೆಗೆ ನಡೆಯಲಿದ್ದು, ಕೊನೆಯ ದಿನದಂದು ದತ್ತಪೀಠಕ್ಕೆ ರಾಜ್ಯದ ವಿವಿಧೆಡೆಗ ಳಿಂದ ಸುಮಾರು 40ಸಾವಿರ ಭಕ್ತರು ಆಗಮಿಸಲಿದ್ದಾರೆ ಎಂದು ಬಜರಂಗ ದಳ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಭಕ್ತರು 7 ದಿನಗಳ ಕಟ್ಟುನಿಟ್ಟಿನ ವ್ರತ ಆಚರಣೆ ನಡೆಸಿ ಅಕ್ಟೋಬರ್ 19 ರಂದು ಹೊನ್ನಮ್ಮನಹಳ್ಳದಲ್ಲಿ ಸ್ನಾನ ಮಾಡಿ ಕಾಲ್ನಡಿಗೆಯಲ್ಲಿ ತೆರಳಿ, ದತ್ತಪೀಠದಲ್ಲಿ ನಡೆಸುವ ಗಣ ಹೋಮ, ದತ್ತಹೋಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
|