ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವರ್ಷಧಾರೆಗೆ ಉದ್ಯಾನನಗರಿ ತತ್ತರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರ್ಷಧಾರೆಗೆ ಉದ್ಯಾನನಗರಿ ತತ್ತರ
ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಉದ್ಯಾನನಗರಿ ತತ್ತರಿಸಿದ್ದು, ಬುಧವಾರ ರಾತ್ರಿ 36.06 ಸೆ.ಮೀ.ನಷ್ಟು ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಧಾರಾಕಾರ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಗೋಡೆ ಕುಸಿದಿದ್ದು, ಹಲವಾರು ಮನೆಯೊಳಗೆ ನೀರು ನುಗ್ಗಿದೆ. ಈ ಬಗ್ಗೆ ವಿವರಣೆ ನೀಡಿದ ದಕ್ಷಿಣ ವಿಭಾಗದ ಉಪ ಆಯುಕ್ತ ಕೃಷ್ಣಮೂರ್ತಿ, ಮಳೆಯಿಂದಾಗಿ ಹಾನಿಗೊಂಡಿರುವ ಮನೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಇದೇ ವೇಳೆ ನಗರದ ಹಲವು ಕಡೆಗಳಲ್ಲಿ ಮಳೆಯಿಂದಾಗಿ ಸುಮಾರು 10ಕ್ಕೂ ಹೆಚ್ಚು ಮರಗಳು ನೆಲಕಚ್ಚಿವೆ. ಹನುಮಂತನಗರದಲ್ಲಿ ಗೋಡೆಗಳು ಕುಸಿದು ಬಿದ್ದಿದೆ.

ಸ್ಥಳಕ್ಕೆ ಶಾಸಕ ರವಿ ಸುಬ್ರಮಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದಲ್ಲಿ ಇನ್ನು ಎರಡು ದಿನಗಳು ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮತ್ತಷ್ಟು
ಅ.19 ರಿಂದ ದತ್ತಮಾಲಾ ಅಭಿಯಾನ
ಕತ್ತಿಗೆ ತೋಟಗಾರಿಕೆ, ಬೆಳ್ಳುಬ್ಬಿಗೆ ಎಂಎಸ್ಐಎಲ್ ಅಧ್ಯಕ್ಷಗಿರಿ
ವಿನಿವಿಂಕ್: 2.46ಕೋಟಿ ಪಾವತಿಗೆ ಕೋರ್ಟ್ ಆದೇಶ
ರೈತರಿಗೆ 'ಗಣೇಶ ಚತುರ್ಥಿ' ಕರೆಂಟ್ ಬೋನಸ್
ಬಿಜಾಪುರ: ಉಷ್ಣ ವಿದ್ಯುತ್ ಸ್ಥಾಪನೆಗೆ ರೈತರ ವಿರೋಧ
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ