ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೆಪಿಸಿಸಿ: ಸಿದ್ದರಾಮಯ್ಯ-ದೇಶಪಾಂಡೆ ಪೈಪೋಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಪಿಸಿಸಿ: ಸಿದ್ದರಾಮಯ್ಯ-ದೇಶಪಾಂಡೆ ಪೈಪೋಟಿ
ಕಳೆದ ಕೆಲವು ತಿಂಗಳಿನಿಂದ ಕುತೂಹಲ ಮೂಡಿಸಿದ್ದ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಈಗ ಅಂತಿಮ ಹಂತ ತಲುಪಿದ್ದು, ಇದೀಗ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಆರ್.ವಿ. ದೇಶಪಾಂಡೆ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಈ ಸಂಬಂಧ ಶೀಘ್ರವೇ ಅಧ್ಯಕ್ಷರ ಆಯ್ಕೆ ಪ್ರಕಟಿಸಲಾಗುವುದು ಎಂದು ಕೆಪಿಸಿಸಿ ಕಚೇರಿ ತಿಳಿಸಿದೆ. ಇಬ್ಬರೂ ಪ್ರಬಲ ಆಕಾಂಕ್ಷಿಯಾಗಿದ್ದರೂ, ಯಾರಿಗೆ ಅಧ್ಯಕ್ಷ ಗಾದಿ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಈ ನಡುವೆ ಮಾಜಿ ಸಚಿವರುಗಳಾದ ಡಿ.ಬಿ. ಚಂದ್ರೇಗೌಡ ಹಾಗೂ ಡಿ.ಕೆ.ಶಿವಕುಮಾರ್ ಹೆಸರುಗಳು ಕೇಳಿ ಬಂದಿದ್ದರೂ, ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡುವ ಕುರಿತು ಹೈಕಮಾಂಡ್ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.

ಅಲ್ಲದೆ, ಪ್ರಭಾವಿ ನಾಯಕ ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರ್ಪಡೆಗೊಂಡಾಗಿನಿಂದ ಸೂಕ್ತ ಸ್ಥಾನಮಾನ ದೊರೆತಿಲ್ಲ ಎಂಬ ಬಗ್ಗೆ ತೀವ್ರ ಅಸಮಾಧಾನಗೊಂಡ ಹಿನ್ನೆಲೆಯಲ್ಲಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವ ಕುರಿತು ಚಿಂತನೆ ನಡೆಸಿದೆ.

ಆದರೆ ಮೂಲ ಹಾಗೂ ವಲಸೆ ಕಾಂಗ್ರೆಸ್ಸಿಗರ ನಡುವೆ ನಡೆಯುತ್ತಿರುವ ಭಿನ್ನಮತ ಈ ಮೂಲಕ ಮತ್ತೆ ಸ್ಫೋಟಗೊಳ್ಳಬಹುದೆಂಬುದು ಹಿರಿಯ ನಾಯಕರ ಅಭಿಪ್ರಾಯ. ಆದರೆ ವಿ ಧಾನಸಭಾ ಉಪಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಶೀಘ್ರವೇ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಮುಂದಾಗಿದೆ.
ಮತ್ತಷ್ಟು
'ನೂರರ ಸಂಭ್ರಮ'ದಲ್ಲಿ ಬಿಜೆಪಿ ಸರ್ಕಾರ
ಅಮೆರಿಕಕ್ಕೆ ತೆರಳಿದ 'ಸಿಎಂ ದಂಡು'
ರಾಜ್ಯದಲ್ಲಿ ಶೀಘ್ರವೇ ರಾಷ್ಟ್ರಪತಿ ಆಳ್ವಿಕೆ: ಧರಂಸಿಂಗ್
ವರ್ಷಧಾರೆಗೆ ಉದ್ಯಾನನಗರಿ ತತ್ತರ
ಅ.19 ರಿಂದ ದತ್ತಮಾಲಾ ಅಭಿಯಾನ
ಕತ್ತಿಗೆ ತೋಟಗಾರಿಕೆ, ಬೆಳ್ಳುಬ್ಬಿಗೆ ಎಂಎಸ್ಐಎಲ್ ಅಧ್ಯಕ್ಷಗಿರಿ