ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿಎಂ ಪ್ರವಾಸಕ್ಕೆ ಖರ್ಗೆ ಲೇವಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಎಂ ಪ್ರವಾಸಕ್ಕೆ ಖರ್ಗೆ ಲೇವಡಿ
ರಾಜ್ಯದಲ್ಲಿ ಒಂದೆಡೆ ಬರಗಾಲ, ಇನ್ನೊಂದೆಡೆ ಪ್ರವಾಹದಿಂದ ಜನ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಿದೇಶ ಪ್ರವಾಸ ಕೈಗೊಂಡಿರುವುದು ಅವರಿಗೆ ರಾಜ್ಯ ದ ಬಗ್ಗೆ ಇರುವ ಕಳಕಳಿ ಎತ್ತಿ ತೋರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬರಗಾಲ ಹಾಗೂ ಪ್ರವಾಹದಿಂದ ಸಾಕಷ್ಟು ಹಾನಿ ಸಂಭವಿಸಿದೆ. ಈ ಬಗ್ಗೆ ಒದಗಿ ಸಬೇಕಾದ ಸೂಕ್ತ ರಕ್ಷಣಾ ಕಾರ್ಯ, ಪರಿಹಾರ ಕಾರ್ಯದೆಡೆಗೆ ಗಮನ ಹರಿಸದಿರುವ ಮುಖ್ಯಮಂತ್ರಿಗಳು, ವಿದೇಶ ಪ್ರಯಾಣ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಮೆರಿಕದಲ್ಲಿ ನಡೆಯಲಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಶಾಸಕರ ಒಡಗೂಡಿ ಮುಖ್ಯಮಂತ್ರಿ ತೆರಳಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು.

ಈ ಪ್ರವಾಸದಿಂದ ರಾಜ್ಯಕ್ಕೆ ಬಂಡವಾಳ ಬರಲಿದೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಆದರೆ ಇಲ್ಲಿ ಸಂಪನ್ಮೂಲ ಬಳಸಿ ತೊಂದರೆಯಲ್ಲಿದ್ದವರಿಗೆ ನೆರವು ನೀಡದಿರುವ ಸರ್ಕಾರ ಅಮೆರಿಕದ ಬಂಡವಾಳ ತಂದು ಯಾರ ಉದ್ದಾರ ಮಾಡಲಿದೆ ಎಂದು ವ್ಯಂಗ್ಯವಾಡಿದರು.
ಮತ್ತಷ್ಟು
ಅಧ್ಯಕ್ಷಗಿರಿ ಬೇಡ - ಸಚಿವ ಸ್ಥಾನ ನೀಡಿ: ಶಂಕರಲಿಂಗೇಗೌಡ
ಹುಬ್ಬಳ್ಳಿ: ಬಾರ್ ಕೌನ್ಸಿಲ್‌‌ಗೆ ಹಿರೇಮಠ ರಾಜೀನಾಮೆ
ಕೆಪಿಸಿಸಿ: ಸಿದ್ದರಾಮಯ್ಯ-ದೇಶಪಾಂಡೆ ಪೈಪೋಟಿ
'ನೂರರ ಸಂಭ್ರಮ'ದಲ್ಲಿ ಬಿಜೆಪಿ ಸರ್ಕಾರ
ಅಮೆರಿಕಕ್ಕೆ ತೆರಳಿದ 'ಸಿಎಂ ದಂಡು'
ರಾಜ್ಯದಲ್ಲಿ ಶೀಘ್ರವೇ ರಾಷ್ಟ್ರಪತಿ ಆಳ್ವಿಕೆ: ಧರಂಸಿಂಗ್