ಪುರಾಣದಲ್ಲಿ ಬೇಡರ ಕಣ್ಣಪ್ಪ ಶಿವನಿಗೆ ತನ್ನೇ ಕಣ್ಣನ್ನೇ ಕಿತ್ತು ಕೊಟ್ಟಿರುವ ಕಥನವನ್ನು ಕೇಳಿದ್ದೇವೆ, ಆದರೆ ಇಲ್ಲಿನ ಬಾದಾಮಿ ಸಮೀಪದ ಕಲಿಯುಗದ ಆಧುನಿಕ ಕಣ್ಣಪ್ಪ ತನ್ನ ಕೈಯಿಂದಲೇ ಕಣ್ಣನ್ನು ಕಿತ್ತು ದೇವರಿಗೆ ಅರ್ಪಿಸಿದ ವಿಚಿತ್ರ ಘಟನೆಯೊಂದು ನಡೆದಿದೆ.
ಬಾದಾಮಿ ತಾಲೂಕಿನ ಅಡಕ ಗ್ರಾಮದ ನಿವಾಸಿಯಾಗಿರುವ ಮುದುಕಪ್ಪ ಕರಡಿಗೆ (55ವ), ಮಧ್ಯರಾತ್ರಿಯಲ್ಲೇ ಮನೆಯಿಂದ ಎದ್ದು ಶಿವಾಲಯಕ್ಕೆ ತೆರಳಿ ತನ್ನ ಕಣ್ಣನ್ನು ಕಿತ್ತು ಇಟ್ಟಿ ದ್ದಾನೆ, ಬಳಿಕ ತನ್ನ ಮತ್ತೊಂದು ಕಣ್ಣನ್ನು ವೀರಭದ್ರಸ್ವಾಮಿಗೆ ನೀಡುವುದಾಗಿ ತೆರಳಲು ಅಣಿಯಾದ ಆತನನ್ನು ಗ್ರಾಮಸ್ಥರು ತಡೆದು, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈತ ಶಂಕರಜ್ಜನ ಪರಮ ಭಕ್ತ,ಕಳೆದ ರಾತ್ರಿ ಮಲಗಿದ್ದಾಗ ಮುದುಕಪ್ಪನ ಕನಸಿನಲ್ಲಿ ದಿಗಂಬರ ಮಠದ ಶಂಕರಜ್ಜ ಬಂದಿದ್ದರು. ಮುದುಕಪ್ಪನ ಮೈಮೇಲೆ ಬಂದು ನಿನ್ನ ಬಲಗಣ್ಣನ್ನು ಸಮರ್ಪಿಸುವಂತೆ ಕೇಳಿದ್ದರಂತೆ.
ಮಧ್ಯರಾತ್ರಿ ಕಿಟಾರನೆ ಕಿರುಚಿ ಎದ್ದು ಓಡಲಾರಂಭಿಸಿದ ಮುದುಕಪ್ಪ ಮಠದ ಸಮೀಪ ಶಂಕರಜ್ಜನ ಮೂರ್ತಿ ಮೇಲೆ ಹೆಬ್ಬೆರಳಿನಿಂದಲೇ ಕಣ್ಣಿಗೆ ತಿವಿದುಕೊಂಡು ಕಿತ್ತುಕೊಂಡಿದ್ದಾನೆ.
ಇದೀಗ ಬಾದಾಮಿ ಆಸ್ಪತ್ರೆ ತುಂಬಾ ಪವಾಡ ಪುರುಷನಂತಾಗಿರುವ ಮುದುಕಪ್ಪನನ್ನು ಕಾಣಲು ಜನಸಾಗರವೇ ಹರಿದು ಬರುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
|