ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪಕ್ಷವನ್ನು ಬಲಪಡಿಸಿ ತೋರಿಸುವೆ:ದೇಶಪಾಂಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಕ್ಷವನ್ನು ಬಲಪಡಿಸಿ ತೋರಿಸುವೆ:ದೇಶಪಾಂಡೆ
NRB
ರಾಜ್ಯದಲ್ಲಿ ಪಕ್ಷವನ್ನು ಬಲಗೊಳಿಸುವ ಕೆಲಸ ಆಗಬೇಕಾಕಿದ್ದು, ಅದನ್ನು ಮಾಡಿ ತೋರಿಸುತ್ತೇನೆ ಎಂದು ನೂತನವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಆರ್. ವಿ. ದೇಶಪಾಂಡೆ ಅವರು ಪ್ರತಿಕ್ರಿಯಿಸಿದ್ದಾರೆ.

ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವನ್ನು ಕಟ್ಟಲು ಹಿರಿಯ ನಾಯಕರ ಜತೆಗೂಡಿ ಕಾರ್ಯನಿರ್ವಹಿಸುವುದಾಗಿ ಹೇಳಿದರು.

ರಾಜ್ಯ ಕಾಂಗ್ರೆಸ್‌‌‌‌ನಲ್ಲಿ ಹಲವು ನಾಯಕರಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ನನ್ನ ಮಿತ್ರರೇ ಎಂದು ತಿಳಿಸಿದ ದೇಶಪಾಂಡೆ, ಅವರೆಲ್ಲರೂ ಪಕ್ಷ ಕಟ್ಟುವ ಕೆಲಸದಲ್ಲಿ ನನಗೆ ಜೊತೆಯಾಗುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ವಯಸ್ಸಿಗೆ ತಕ್ಕ ಹುದ್ದೆ:ಡಿಕೆಶಿ

ನನ್ನ ವಯಸ್ಸಿಗೆ ತಕ್ಕ ಹುದ್ದೆ ನೀಡುವುದು ತಮಗೆ ಸಂತೋಷವಾಗಿ ಸ್ವೀಕರಿಸಿದ್ದೇನೆ ಎಂದು ಪ್ರತಿಕ್ರಿಯಿಸಿದವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್.

ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಕಷ್ಟದ ಪರಿಸ್ಥಿತಿಯಲ್ಲಿದೆ. ಹಲವು ಸವಾಲುಗಳು ಪಕ್ಷದ ಮುಂದಿದೆ. ಈ ನಿಟ್ಟಿನಲ್ಲಿ ಅವುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿದೆ. ಈ ಸಾಮರ್ಥ್ಯವನ್ನು ಬಳಸಿಕೊಂಡು ಪಕ್ಷವನ್ನು ಮತ್ತಷ್ಟು ಬಲಪಡಿಸುವ ಬಹುದೊಡ್ಡ ಜವಾಬ್ದಾರಿ ತಮ್ಮ ಮೇಲಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು
ಕೆಪಿಸಿಸಿ ಅಧ್ಯಕ್ಷಗಾದಿ ಆಕಾಂಕ್ಷಿಯಲ್ಲ:ಸಿದ್ದರಾಮಯ್ಯ
ಕೆಪಿಸಿಸಿಗೆ ಆರ್.ವಿ.ದೇಶಪಾಂಡೆ ಸಾರಥ್ಯ
ದಸರಾ ಪ್ರಚಾರ ಉಪಸಮಿತಿಗೆ ಸಿಎಂ ಚಾಲನೆ
ಆರ್ಚ್ ಬಿಷಪ್ ವಿರುದ್ಧ ಡೆರಿಕ್ ಕಿಡಿ
ಕೇಂದ್ರ-ರಾಜ್ಯದ ವಿರುದ್ಧ ಜೆಡಿಎಸ್ ಪ್ರತಿಭಟನೆ
ಮಾರುಕಟ್ಟೆ ಬಲಪಡಿಸಲು ಅತ್ಯಾಧುನಿಕ ಕ್ರಮ:ತಂಗಡಗಿ