ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶೂಟೌಟ್ ಪ್ರಕರಣ:ಹೃಷಿಕೇಶ್ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೂಟೌಟ್ ಪ್ರಕರಣ:ಹೃಷಿಕೇಶ್ ಬಂಧನ
ಮದ್ಯಪಾನ ಮಾಡಿದ ನಶೆಯಲ್ಲಿ ಗುಂಡು ಹಾರಿಸಿ ಕೊಲೆಗೆ ಪ್ರಯತ್ನ ಮಾಡಿದ ಆರೋಪದ ಮೇಲೆ ಕಟ್ಟಡ ಗುತ್ತಿಗೆದಾರ ಹೃಷಿಕೇಶ ಉಪಾಧ್ಯಾಯ ಅವರನ್ನು ಸಂಜಯನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ನಾಗಶೆಟ್ಟಿ ಗುಂಡಪ್ಪ ರಸ್ತೆ ನಿವಾಸಿ ಸಂಜಯ್ ಶರ್ಮಾ ನೀಡಿದ ದೂರಿನ ಮೇಲೆ ಉಪಾಧ್ಯಾಯರನ್ನು ಬಂಧಿಸಿದ್ದು, ಆತನಿಂದ ರಿವಾಲ್ವಾರ್ ವಶಪಡಿಸಿಕೊಳ್ಳಲಾಗಿದೆ ಎಂದು ಸೈಯ್ಯದ್ ಉಲ್ಫತ್ ಹುಸೇನ್ ತಿಳಿಸಿದ್ದಾರೆ.

ನಾಗಶೆಟ್ಟಿಹಳ್ಳಿ ಗಣೇಶ ಬೇಕರಿ ಸಮೀಪ ನಿನ್ನೆ (ಭಾನುವಾರ) ರಾತ್ರಿ 10.30ರಲ್ಲಿ ಈ ಪ್ರಕರಣ ನಡೆದಿದೆ. ಸಂಜಯ ಶರ್ಮಾ ಹಿಮಾಚಲಪ್ರದೇಶದವರಾಗಿದ್ದು, ಹೃಷಿಕೇಶ ಉಪಾಧ್ಯಾಯ ಉತ್ತರ ಪ್ರದೇಶ ರಾಜ್ಯದವನು. ಇಬ್ಬರೂ ಕಟ್ಟಡ ಗುತ್ತಿಗೆದಾರರಾಗಿದ್ದು, ಕಳೆದ 6 ವರ್ಷಗಳಿಂದ ಅವರಿಬ್ಬರು ಸ್ನೇಹಿತರಾಗಿದ್ದು ಕಟ್ಟಡಗಳಿಗೆ ಸುಣ್ಣ ಬಣ್ಣ ಹೊಡೆಸುವ ಗುತ್ತಿಗೆ ನಿರ್ವಹಿಸುತ್ತಿದ್ದರು.

ಸುಮಾರು 1 ಲಕ್ಷ ರೂ. ಹಣವನ್ನು ಆರೋಪಿ ಸಂಜಯ್ ಶರ್ಮಾಗೆ ಕೊಟ್ಟಿದ್ದ, ಶರ್ಮಾ ಹಣ ವಾಪಸ್ ಮಾಡದೇ ಹೋಗಿದ್ದರಿಂದ ಹೃಷಿಕೇಶ ಉಪಾಧ್ಯಾಯ ನಾಗಶೆಟ್ಟಿಯಲ್ಲಿರುವ ಸಂಜಯ್ ಶರ್ಮಾ ಮನೆಗೆ ಕಾರಿನಲ್ಲಿ ನಿನ್ನೆ ರಾತ್ರಿ ಬಂದಾಗ ನಡೆದ ಮಾತಿನ ಚಕಮಕಿ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೇಂದ್ರದಿಂದ ಸೇಡಿನ ರಾಜಕಾರಣ:ಯಡಿಯೂರಪ್ಪ
ಮೈಸೂರು ಗೊಮ್ಮಟನಿಗೆ ಮಸ್ತಕಾಭಿಷೇಕ
ದತ್ತ ಅಭಿಯಾನಕ್ಕೆ ಶಾಂತಿಯುತ ತೆರೆ
ಬೇಕಾಬಿಟ್ಟಿ ಹೇಳಿಕೆ ನೀಡಬೇಡಿ: ಸುದರ್ಶನ್
ಮೊಕದ್ದಮೆ ರಾಜಕಾರಣಿಗಳಿಗೆ ಪಾಠ: ಸುರೇಶ್
ಅಶೋಕ್‌‌ರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ:ದೇಶಪಾಂಡೆ