ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಉಪಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಿರಿ: ಕೃಷ್ಣಭೈರೇಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಪಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಿರಿ: ಕೃಷ್ಣಭೈರೇಗೌಡ
NRB
ದ್ವೇಷದ ರಾಜಕಾರಣ ಸೇರಿದಂತೆ ವರ್ಗಾವಣೆಯಲ್ಲಿಯೇ ಕಾಲ ಕಳೆಯುತ್ತಿರುವ ಬಿಜೆಪಿ ಸರಕಾರಕ್ಕೆ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೃಷ್ಣಭೈರೇಗೌಡ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮದ್ದೂರಿನ ಮದ್ದೂರಮ್ಮ ದೇವಾಲಯದ ಆವರಣದಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿರುವ ಭಾಜಪ, ತುಘಲಕ್ ದರ್ಬಾರ್ ಮಾದರಿಯಲ್ಲಿ ಆಡಳಿತ ನಡೆಸುತ್ತಿರುವುದಾಗಿ ಆರೋಪಿಸಿದರು.

ಹಣ ಹಾಗೂ ಅಧಿಕಾರದಿಂದ ಏನು ಬೇಕಾದರು ಮಾಡಬಹುದು ಎಂದು ತಿಳಿದಿರುವ ಭಾರತೀಯ ಜನತಾಪಕ್ಷ ಆಪರೇಶನ್ ಕಮಲದ ಮೂಲಕ ಪ್ರಜಾಪ್ರಭುತ್ವಕ್ಕೆ ಕಳಂಕ ತರುವಂತೆ ನಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತತ್ವಬದ್ಧ ರಾಜಕಾರಣಕ್ಕೆ ತಿಲಾಂಜಲಿ ನೀಡಿರುವ ಭಾರತೀಯ ಜನತಾ ಪಕ್ಷ ರಾಜಕೀಯದ ಘನತೆ, ಗೌರವನ್ನು ಹಾಳುಗೆಡವಿದೆ. ಆ ಕಾರಣಕ್ಕೆ ಮುಂಬರುವ ಉಪಚುನಾವಣೆಯಲ್ಲಿ ಅದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೀತಿ ಸಂಹಿತೆ ನಡುವೆಯೂ ಮತ್ತೆ ಅಧಿಕಾರಿಗಳ ವರ್ಗ
ಕೇರಳ ಸಿಎಂ ವಿರುದ್ಧ ಉನ್ನಿಕೃಷ್ಣನ್ ಕೆಂಡಾಮಂಡಲ
ಮುಂಬೈ ದಾಳಿ: ಬೆಂಗಳೂರಿನಲ್ಲಿ ಅಕ್ಮಲ್ ವಿಚಾರಣೆ ?
ಏಕತೆ ಪ್ರದರ್ಶನಕ್ಕೆ ದೇವೇಗೌಡ ಕರೆ
ರಾಜ್ಯದಲ್ಲಿ ಕೃಷಿ ಉದ್ಯೋಗ ಸೃಷ್ಟಿಗೆ ರೈತ ಸಂಘ ಒತ್ತಾಯ
ಸಾಮೂಹಿಕ ಮ‌ೂತ್ರ ವಿಸರ್ಜನೆ: ವಾಟಾಳ್ ವರಸೆ