ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪೋಲಿಯೋ ಲಸಿಕೆ ಸುರಕ್ಷಿತ: ಸಚಿವ ಶ್ರೀರಾಮುಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೋಲಿಯೋ ಲಸಿಕೆ ಸುರಕ್ಷಿತ: ಸಚಿವ ಶ್ರೀರಾಮುಲು
ಪೊಲೀಯೋ ಲಸಿಕೆ ಹಾಕಿಸಿದ ಮಕ್ಕಳು ಅಸ್ವಸ್ಥರಾಗಿದ್ದಾರೆಂಬುದು ನಿರಾಧಾರ ವದಂತಿಯಾಗಿದ್ದು, ಜನರು ಇದಕ್ಕೆ ಕಿವಿಗೊಡಬಾರದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ವದಂತಿಯಿಂದ ಸಾರ್ವಜನಿಕರಿಗಾದ ಆತಂಕದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪಲ್ಸ್ ಪೋಲಿಯೋ ಲಸಿಕೆ ಹಾಕಿದ್ದರಿಂದ ಮಕ್ಕಳಿಗೆ ಯಾವುದೇ ತೊಂದರೆಯಾದ ಬಗ್ಗೆ ಒಂದು ಪ್ರಕರಣವೂ ಬೆಳಕಿಗೆ ಬಂದಿಲ್ಲ. ಪಲ್ಸ್ ಪೋಲಿಯೋ ಲಸಿಕೆ ಮಕ್ಕಳ ಆರೋಗ್ಯ ಪೋಷಣೆಗೆ ಮಾಡಿದ ಯೋಜನೆಯೇ ಹೊರತು ಅದರಿಂದ ಯಾವುದೇ ಅಪಾಯ ಇಲ್ಲ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ಪಲ್ಸ್ ಪೋಲಿಯೋ ಲಸಿಕೆಯಿಂದ ಮಕ್ಕಳ ಅಸ್ವಸ್ಥರಾಗಿದ್ದಾರೆಂಬ ವದಂತಿ ತಮಿಳುನಾಡು ಕಡೆಯಿಂದ ಬಂದಿದ್ದು, ಇದು ಕೇವಲ ವದಂತಿಯೇ ಹೊರತು ಇದರಲ್ಲಿ ಯಾವುದೇ ಹುರುಳಿಲ್ಲ. ಆತಂಕಗೊಂಡ ಪೋಷಕರು ನಿನ್ನೆ ತಡರಾತ್ರಿ ವಿವಿದ ಆಸ್ಪತ್ರೆಗಳಿಗೆ ತೆರಳಿ ತಮ್ಮ ಮಕ್ಕಳನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಅಲ್ಲೂ ಕೂಡ ವೈದ್ಯರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದು, ಪೋಷಕರು ನಿರಾತಂಕದಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

ನಿನ್ನೆ ಸುಮಾರು 60 ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹನಿ ಹಾಕಲಾಗಿದ್ದು, ಶೇ.85 ರಷ್ಟು ಯಶಸ್ವೀ ಕಾರ್ಯಕ್ರಮ ನಡೆಸಲಾಗಿದೆ. ಜನರು ಆತಂಕಪಡಬಾರದು, ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮದ್ದೂರಿನಲ್ಲಿ 5 ಸಾವಿರಕ್ಕೂ ಹೆಚ್ಚು ಸೀರೆ ವಶ
ಪೊಲೀಸ್ ಜೀಪುಗಳಲ್ಲೇ ಹಣ ಸಾಗಣೆ: ಕುಮಾರ್
ಅಕ್ರಮದಲ್ಲಿ ವೀಕ್ಷಕರೂ ಶಾಮೀಲು: ಡಿಕೆಶಿ
ಆರ್ಥಿಕ ಬಿಕ್ಕಟ್ಟು ಗುರುತಿಸುವಲ್ಲಿ ವಿಫಲ: ಯು.ಆರ್.ರಾವ್
ಗುಲ್ಬರ್ಗಾದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 5 ಬಲಿ
ಚಿತ್ರರಂಗಕ್ಕೆ ನೆರವಾಗುವಂತೆ ಸಾಹಿತಿಗಳಿಗೆ ಕರೆ