ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವದಂತಿಕೋರ ಸುದ್ದಿ ವಾಹಿನಿ ವಿರುದ್ಧ ಆಚಾರ್ಯ ತರಾಟೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವದಂತಿಕೋರ ಸುದ್ದಿ ವಾಹಿನಿ ವಿರುದ್ಧ ಆಚಾರ್ಯ ತರಾಟೆ
NRB
ಪೋಲಿಯೋ ವದಂತಿ ಹರಡುವಲ್ಲಿ ಖಾಸಗಿ ಚಾನೆಲ್ ಒಂದರ ಬೇಜವಾಬ್ದಾರಿಯುತ ಬ್ರೇಕಿಂಗ್ ನ್ಯೂಸ್ ವರದಿ ಬಿತ್ತರವೇ ಕಾರಣ ಎಂದು ಗೃಹಸಚಿವ ವಿ.ಎಸ್. ಆಚಾರ್ಯ ದೂರಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗೃಹಸಚಿವರು, "ಪೋಲಿಯೋ ಲಸಿಕೆಯಿಂದ ಮಕ್ಕಳು ಅಸ್ವಸ್ಥರಾಗುತ್ತಿದ್ದಾರೆ ಎಂದು ಸುದ್ದಿ ಪ್ರಕಟಿಸಿದ ಚಾನೆಲ್, ನಂತರ ತಾನೇ ಕೆಲವು ಜನರನ್ನು ಆಸ್ಪತ್ರೆಗಳ ಬಳಿ ಕಳುಹಿಸಿ ವೈದ್ಯರಲ್ಲಿ ವಿಚಾರಿಸುವಂತೆ ವ್ಯವಸ್ಥಿತ ತಂತ್ರ ಮಾಡಿರುವ ಕುರಿತು ನಮಗೆ ಮಾಹಿತಿ ಬಂದಿದೆ" ಎಂದು ಮಾಧ್ಯಮ ಪ್ರತಿನಿಧಿಗಳ ಜೊತೆ ವಾಗ್ವಾದಕ್ಕಿಳಿದರು.

ಚಾನಲ್ ಹೆಸರನ್ನು ಪ್ರಸ್ತಾಪಿಸದೆ ದಾಳಿ ನಡೆಸುತ್ತಿದ್ದ ಆಚಾರ್ಯ ಅವರನ್ನು ಇತರ ಮಾಧ್ಯಮ ಪ್ರತಿನಿಧಿಗಳು ಸ್ಪಷ್ಟೀಕರಣ ಕೋರಿದಾಗ, ನಾನು ಮಾತನಾಡುವುದು ಆ ಒಂದು ವಾಹಿನಿ ವಿರುದ್ಧ ಮಾತ್ರ ಎಂದು ಮತ್ತೆ ಪುನರುಚ್ಚರಿಸಿದರು.

ಇಷ್ಟಕ್ಕೇ ಸುಮ್ಮನಾಗದ ಗೃಹಸಚಿವರು, ನಾನೂ ವೈದ್ಯ ಪದವಿ ಪಡೆದಿದ್ದೇನೆ. ನಲವತ್ತು ವರ್ಷಗಳ ಕಾಲ ನಾನು ವೈದ್ಯಕೀಯ ವಲಯದ ಆಗುಹೋಗುಗಳನ್ನು ಗಮನಿಸುತ್ತ ಬಂದಿದ್ದೇನೆ. ಆದರೆ ಎಲ್ಲೂ ಪೋಲಿಯೋ ಲಸಿಕೆಯಿಂದ ಮಗು ಅಸ್ವಸ್ಥವಾದ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ ಎಂದು ನುಡಿದರು.

ಇಂತಹ ಒಂದು ರಾಷ್ಟ್ತ್ರೀಯ ಕಾರ್ಯಕ್ರಮದ ಬಗ್ಗೆ ವರದಿ ಮಾಡುವಾಗ ಚಾನಲ್ಗಳು ಕನಿಷ್ಠ ಪರಿಜ್ಞಾನವಿಲ್ಲದೆ ಕೇವಲ ಜನಪ್ರಿಯತೆಗಾಗಿ ವರದಿ ಮಾಡಬಾರದು. ಪೊಲಿಯೋ ಹನಿ ಕಾರ್ಯಕ್ರಮವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಹಳ ಜತನದಿಂದ ನಿರ್ವಹಿಸಿಕೊಂಡು ಬಂದಿವೆ. ಆದ್ದರಿಂದ ಚಾನೆಲ್ಗಳು ಎಚ್ಚರ ವಹಿಸುವುದು ಅತ್ಯಗತ್ಯ ಎಂದು ಆಚಾರ್ಯ ಪ್ರತಿಪಾದಿಸಿದರು.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಥಾನಮಾನ ಕೇಳೋರು ಪ್ರಚಾರಕ್ಕೆ ಬರ್ತಿಲ್ಲ: ಡಿಕೆಶಿ
ಗಣಿ ವರದಿಯಲ್ಲಿ ಚೆನ್ನಿಗಪ್ಪ ಹೆಸರಿಲ್ಲವೇಕೆ: ಮೊಯ್ಲಿ ಪ್ರಶ್ನೆ
ಸುಳ್ಳು, ಗೂಂಡಾಗಿರಿ ಬಿಡಿ ಓಲ್ಡ್ ಮ್ಯಾನ್
'ಲಾಲು ಸಂಬಂಧಿ' ಎಂದ ವಂಚಕಿ 'ಮಾವನ' ಮನೆಗೆ
ನೈಸ್‌ಗೆ ಗೌಡರೇ ವಿಘ್ನ: ಖೇಣಿ ಕಿಡಿಕಿಡಿ
ಗಣಿ ವರದಿ ಅಧಿವೇಶನದಲ್ಲಿ ಚರ್ಚೆಯಾಗಲಿ: ಕುಮಾರಸ್ವಾಮಿ