ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರೆಡ್ಡಿಯಿಂದ ತಿಮ್ಮಪ್ಪನಿಗೆ 45ಕೋಟಿ ರೂ.ವಜ್ರ ಕಿರೀಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೆಡ್ಡಿಯಿಂದ ತಿಮ್ಮಪ್ಪನಿಗೆ 45ಕೋಟಿ ರೂ.ವಜ್ರ ಕಿರೀಟ
WD
ರಾಜ್ಯ ರಾಜಕಾರಣದಲ್ಲಿ ಭಿನ್ನಮತದ ಕಿಡಿಹೊತ್ತಿಸಿ ಸುದ್ದಿಮಾಡುತ್ತಿರುವ ಬಳ್ಳಾರಿ ಗಣಿಧಣಿಗಳಲ್ಲಿ ಒಬ್ಬರಾದ ಸಚಿವ ಜನಾರ್ದನ ರೆಡ್ಡಿಯವರು ತಿರುಪತಿ ತಿಮ್ಮಪ್ಪನಿಗೆ ಗುರುವಾರ ವಜ್ರದ ಖಚಿತ ಕಿರೀಟವನ್ನು ಕಾಣಿಕೆಯಾಗಿ ನೀಡಿದ್ದು, ಇದರ ಬೆಲೆ 45ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ!

ಹಾಂ ಅಂತ ಹುಬ್ಬೇರಿಸಬೇಡಿ, ಇದು ಅಕ್ಷರಶ ನಿಜ. ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರನಿಗೆ ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಅಳಿಲು ಸೇವೆ ಎಂಬಂತೆ ಸುಮಾರು 45ಕೋಟಿ ರೂ.ಗಳ ವೆಚ್ಚದಲ್ಲಿ ವಜ್ರ, ಹವಳ, ಮುತ್ತುಗಳಿಂದ ನಿರ್ಮಿಸಿರುವ ಕಿರೀಟವನ್ನು ಇಂದು ಪತ್ನಿ ಸಮೇತರಾಗಿ ಅರ್ಪಿಸಿದರು.

45ಕೋಟಿಗಳ ರೂ.ಗಳ ಮೌಲ್ಯದ ಈ ವಜ್ರಕಿರೀಟವನ್ನು ತಯಾರಿಸಲು, ಅದರಲ್ಲಿ ನಿಷ್ಣಾತರಾದ ಕಾರ್ಮಿಕರು 9ತಿಂಗಳ ಕಾಲಾವಕಾಶ ತೆಗೆದುಕೊಳ್ಳಲಾಗಿದೆ.

NRB
ತಿರುಪತಿ ತಮ್ಮಪ್ಪನ ದಯೆ, ಆಶೀರ್ವಾದಗಳಿಂದ ತಮ್ಮ ವ್ಯಾಪಾರ, ವ್ಯವಹಾರ, ಕೆಲಸಗಳೆಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಆಂಧ್ರದ ಕಡಪದಲ್ಲಿ ನಿರ್ಮಿಸುತ್ತಿರುವ ಸಹಸ್ರಾರು ಕೋಟಿ ರೂ.ಗಳ ವೆಚ್ಚದ ಬ್ರಹ್ಮಿಣಿ ಉಕ್ಕು ಕಾರ್ಖಾನೆಯ ಕಾಮಗಾರಿಕೆಯೂ ಸಹ ಸಮರ್ಪಕವಾಗಿ ನಡೆಯುತ್ತಿರುವುದರಿಂದ ರೆಡ್ಡಿ ಕುಟುಂಬ ಈ ಕಾಣಿಕೆಯನ್ನು ಅಳಿಲು ಸೇವೆಯನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಲಿದೆ ಎಂದು ಹೇಳಲಾಗಿದೆ.

ಎಲ್ಲವೂ ನಿರೀಕ್ಷೆಯಂತೆ ನಡೆದರೆ 2010ರ ವೇಳೆಗೆ ಬ್ರಹ್ಮಿಣಿ ಸ್ಟೀಲ್ಸ್ ಕಾರ್ಖಾನೆಯ ಉತ್ಪಾದನೆಯನ್ನು ಪ್ರಾರಂಭಿಸಲಿದೆ ಎಂದು ಹೇಳಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಚಿವ ಸಂಪುಟ ಸಭೆಗೆ 6 ಸಚಿವರು ಗೈರು!
ಸರ್ಕಾರ ಅಸ್ಥಿರಗೊಳಿಸುವ ಸಂಚು ಇಲ್ಲ: ಎಚ್‌ಡಿಕೆ
ಯೋಧರಿಂದ ಶೋಧ: ಅಭಿಷೇಕ್ ದೇಹ ಪತ್ತೆಯಾಗಿಲ್ಲ
ಕೈಗಾ ಅಣು ವಿಜ್ಞಾನಿ ಮಹಾಲಿಂಗಂ ನಾಪತ್ತೆ ನಿಗೂಢ
ನೌಶಾದ್ ಕೊಲೆ ವಿಚಾರಣೆಗೆ ಬೇರೆ ಏಜೆನ್ಸಿ ಬೇಡ: ಹೈಕೋರ್ಟ್
ಬಿಬಿಎಂಪಿ ಆಡಳಿತಾಧಿಕಾರಿ ಮನೆಗೆ ಸಿಬಿಐ ದಾಳಿ