ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಉದ್ಯಾನನಗರಿಯಲ್ಲಿ ಸುಪ್ರೀಂ ಪೀಠಕ್ಕಾಗಿ ದೆಹಲಿ ಚಲೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ಯಾನನಗರಿಯಲ್ಲಿ ಸುಪ್ರೀಂ ಪೀಠಕ್ಕಾಗಿ ದೆಹಲಿ ಚಲೋ
ನಗರದಲ್ಲಿ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಸ್ಥಾಪಿಸುವಂತೆ ಭಾರತದ ಮುಖ್ಯ ನ್ಯಾಯಾಧೀಶರನ್ನು ಹಾಗೂ ಪ್ರಧಾನ ಮಂತ್ರಿಗಳನ್ನು ಒತ್ತಾಯಿಸಿ ನೆರೆ ರಾಜ್ಯಗಳ ವಕೀಲರೊಂದಿಗೆ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಕರ್ನಾಟಕ ವಕೀಲರ ಒಕ್ಕೂಟದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ಈಗಾಗಲೇ ಅನೇಕ ಬಾರಿ ಪ್ರಧಾನಿ ಹಾಗೂ ಕೇಂದ್ರ ಸರ್ಕಾರವನ್ನು ಮನವಿ ಮೂಲಕ ಕೋರಲಾಗಿದೆ. ಆದರೂ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಸುಮಾರು 300ವಕೀಲರೊಂದಿಗೆ ದೆಹಲಿ ಚಲೋ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಹೇಳಿದರು.

ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಹೆಚ್ಚಿನ ಸ್ಥಳಾವಕಾಶವಿದ್ದು, ಕುಟುಂಬ ನ್ಯಾಯಾಲಯವನ್ನು ವರ್ಗಾಯಿಸುವುದರೊಂದಿಗೆ ವಕೀಲರ ನಿವೃತ್ತಿ ಅಥವಾ ಮರಣ ಸಂಭವಿಸಿದಾಗ ಕರ್ನಾಟಕ ವಕೀಲರ ಪರಿಷತ್ತಿನಿಂದ ನೀಡಲಾಗುವ ಮೊತ್ತವನ್ನು 1.5ಲಕ್ಷದಿಂದ 3.5ಲಕ್ಷಕ್ಕೆ ಹೆಚ್ಚಿಸಿ ಕಲ್ಯಾಣ ನಿಧಿಯಲ್ಲಿ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕರ್ನಾಟಕಕ್ಕೆ ಮಂಜೂರಾದ 8 ಹೊಸ ರೈಲುಗಳು
ಸಿದ್ದರಾಮಯ್ಯ ನಾಲಿಗೆ ಬಿಗಿ ಹಿಡಿದು ಮಾತಾಡಲಿ: ರೆಡ್ಡಿ
ಬಿಬಿಎಂಪಿ ಚುನಾವಣೆ; ಸರ್ಕಾರ ಕೋರ್ಟ್‌ಗೆ ಮೊರೆ
ಮೈಸೂರು ಕೋಮುದಳ್ಳುರಿ: ಮತ್ತೆ ಮೂವರಿಗೆ ಇರಿತ
ಕೆಎಸ್ಸಾರ್ಟಿಸಿ ಮುಖಾಮುಖಿ ಡಿಕ್ಕಿ: ನಾಲ್ವರು ಬಲಿ
ರಾಜ್ಯದಲ್ಲಿ ಶೀಘ್ರವೇ ಸಂಪೂರ್ಣ ಗೋಹತ್ಯೆ ನಿಷೇಧ: ಆಚಾರ್ಯ