ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಭಾರತದ ವಿರುದ್ಧ ಅಮೆರಿಕ 'ಡಬ್ಬಲ್‌ಗೇಮ್': ಎಚ್‌ಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ ವಿರುದ್ಧ ಅಮೆರಿಕ 'ಡಬ್ಬಲ್‌ಗೇಮ್': ಎಚ್‌ಡಿಕೆ
NRB
ಆರ್ಥಿಕವಾಗಿ ಬಲಾಢ್ಯವಾಗುತ್ತಿರುವ ಭಾರತವನ್ನು ಯಾವುದೇ ಕಾರಣಕ್ಕೂ ತಿರಸ್ಕಾರದಿಂದ ನೋಡಲಾಗದ ಸ್ಥಿತಿಯನ್ನು ಅಮೆರಿಕ ಅನುಭವಿಸುತ್ತಿದೆ. ಆದರೂ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡಿ ಭಾರತದ ವಿರುದ್ಧ ಎತ್ತಿ ಕಟ್ಟುತ್ತಿದೆ ಎಂದು ಸಂಸದ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹನ್ನೊಂದು ಯುವ ಸಂಸದರ ತಂಡದಲ್ಲಿ ಯೆಲ್ ವಿಶ್ವವಿದ್ಯಾಲಯದ ಯುವ ನಾಯಕತ್ವದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬುಧವಾರ ನಗರಕ್ಕೆ ವಾಪಸಾದ ಅವರು ಪ್ರಜಾವಾಣಿಯೊಂದಿಗೆ ಮಾತನಾಡಿದರು.

ಒಂದು ರೀತಿಯಲ್ಲಿ ಅಮೆರಿಕ ಭಾರತದ ವಿರುದ್ಧ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದರು. ಅಮೆರಿಕದ ನ್ಯೂ ಹೆವೆನ್‌ನಲ್ಲಿರುವ ಈ ವಿಶ್ವವಿದ್ಯಾಲಯದಲ್ಲಿ ಐದು ದಿನಗಳ ಕಾಲ ಸತತವಾಗಿ ಕಾರ್ಯಕ್ರಮ ನಡೆಯಿತು. 80ರಲ್ಲಿ ಪದವಿ ಪೂರ್ಣಗೊಳಿಸಿದ್ದ ನನಗೆ ಮತ್ತೆ ಕಾಲೇಜಿನ ದಿನಗಳು ನೆನಪಾಯಿತು ಎಂದರು.

ಒಬಾಮ ಆಡಳಿತದಲ್ಲಿ ಅಘ್ಘಾನಿಸ್ತಾನ-ಪಾಕಿಸ್ತಾನ ಬಾಂಧವ್ಯ, ಮುಖಂಡತ್ವ ನಿರ್ವಹಣೆ, ಬಡತನ, ಭಾರತ ಮತ್ತು ಚೀನಾ ಆರ್ಥಿಕ ಶಕ್ತಿ, ರಾಜಕೀಯದಲ್ಲಿ ಧರ್ಮ, ನಾಗರಿಕತೆಯ ಆರಂಭ ಹೀಗೆ ಅನೇಕ ಚರ್ಚೆಗಳು ನಡೆದವು ಎಂದು ಹೇಳಿದರು.

ಅಮೆರಿಕದ ಹಿರಿಯ ಸೆನೆಟ್ ಸದಸ್ಯರ ಜೊತೆ ಸಂವಾದ ನಡೆಸಿದಾಗ, ಭಾರತದ ಕುರಿತ ಅಮೆರಿಕದ ದ್ವಿಮುಖ ನೀತಿಯ ಬಗ್ಗೆ ಸಮರ್ಪಕ ಉತ್ತರ ದೊರೆಯಲಿಲ್ಲ. ಇರಾನ್-ಪಾಕಿಸ್ತಾನ ಅನಿಲ ಕೊಳವೆ ಮಾರ್ಗಕ್ಕೆ ಹಸಿರು ನಿಶಾನೆ ತೋರಿದರೆ ಭಾರತದ ಮೂಲಕ ಚೀನಾ ಸಹ ಅನಿಲ ಪಡೆಯಬಹುದು ಎನ್ನುವ ಗುಮಾನಿ ಅವರಲ್ಲಿದೆ. ಆದರೆ ವೆಚ್ಚ ಹೆಚ್ಚಾಗುತ್ತದೆ ಎನ್ನುವ ಕಾರಣವನ್ನು ನೀಡಿದರು.

ಒಬಾಮ ಸರ್ಕಾರ ಪಾಕಿಸ್ತಾನಕ್ಕೆ ವರ್ಷಕ್ಕೆ 1.5ಶತಕೋಟಿ ಡಾಲರ್ ಸಹಾಯ ನೀಡುತ್ತಿದೆ. ಇದನ್ನು ಭಾರತದ ವಿರುದ್ಧ ಬಳಸದಂತೆ ಹೇಗೆ ತಡೆಯುತ್ತೀರಿ ಎನ್ನುವ ಪ್ರಶ್ನೆಗೂ ಸರಿಯಾದ ಉತ್ತರ ದೊರೆತಿಲ್ಲ ಎಂದು ಅಮೆರಿಕದ ಡಬ್ಬಲ್ ಗೇಮ್ ಕುರಿತು ವಿವರಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೇಣುಕಾ ತಾಲಿಬಾನ್ ಹೇಳಿಕೆ;ಪೊಲೀಸರ 'ಬಿ' ರಿಪೋರ್ಟ್‌‌
ಡಬ್ಬಿಂಗ್ ಜಾಹೀರಾತಿಗೆ ನಿಷೇಧ ಹೇರಿ: ಬಾಬು
ಭಾಷಾ ಮಾಧ್ಯಮ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಮೂರು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ
ಉದ್ಯಾನನಗರಿಯಲ್ಲಿ ಸುಪ್ರೀಂ ಪೀಠಕ್ಕಾಗಿ ದೆಹಲಿ ಚಲೋ
ರೈಲ್ವೇ ಬಜೆಟ್: ಕರ್ನಾಟಕಕ್ಕೆ ಏನೆಲ್ಲಾ ಸಿಕ್ಕಿದೆ ಗೊತ್ತೇ?