ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಲವ್ ಜಿಹಾದ್ ವಿರುದ್ಧ 'ಬೇಟಿ ಬಚಾವೋ' ಆಂದೋಲನ:ಮುತಾಲಿಕ್ (Pramod mutalik, Srirama sene, Love jihad, Beti bacho campaign, Muslim)
Feedback Print Bookmark and Share
 
PTI
ರಾಜ್ಯದಲ್ಲಿ ಲವ್ ಜಿಹಾದ್ ಹಾವಳಿ ಹೆಚ್ಚಿದ ಹಿನ್ನೆಲೆಯಲ್ಲಿ ಹಿಂದೂ ಜನಾಂಗದ ಎಚ್ಚರಿಕೆಗಾಗಿ 'ಬೇಟಿ ಬಚಾವೋ' (ಮಗಳನ್ನು ರಕ್ಷಿಸಿ) ಆಂದೋಲನವನ್ನು ಶೀಘ್ರದಲ್ಲಿ ಆರಂಭಿಸುವುದಾಗಿ ಶ್ರೀರಾಮಸೇನೆ ಸಂಘಟನೆ ಮುಖಂಡ ಪ್ರಮೋದ್ ಮುತಾಲಿಕ್ ಘೋಷಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದಕ್ಷಿಣ ಭಾರತದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ಷಡ್ಯಂತ್ರ ತಡೆಯಲು ಈ ಆಂದೋಲನ ಅನಿವಾರ್ಯ ಎಂದರು. ಕಳೆದ ಒಂದೆರಡು ವರ್ಷಗಳಿಂದ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿಸುವ ನೆಪದಲ್ಲಿ ಲವ್ ಜಿಹಾದ್ ಆರಂಭಿಸಿದ್ದಾರೆ. ಇದರ ಹಿಂದೆ ಭಯೋತ್ಪಾದಕ ಸಂಘಟನೆಗಳ ಕೈವಾಡ ಇರುವ ಶಂಕೆಯೂ ವ್ಯಕ್ತವಾಗಿದೆ. ಈ ಕೃತ್ಯ ಹೀಗೆ ಬಿಟ್ಟರೆ ದೇಶದ ಸಮಗ್ರತೆಗೆ ಹಾಗೂ ಏಕತೆಗೆ ಧಕ್ಕೆ ಎದುರಾಗುವ ದಿನಗಳು ದೂರವಿಲ್ಲ ಎಂದರು.

ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಗಿಮಿಕ್ ಮೂಲಕ ಬುಟ್ಟಿಗೆ ಹಾಕಿಕೊಂಡು ಮದುವೆಯಾಗುತ್ತಾರೆ. ನಂತರ ಕೆಲ ವರ್ಷಗಳ ನಂತರ ಕೈಬಿಟ್ಟಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಆದ್ದರಿಂದ ತಂದೆ-ತಾಯಂದಿರು ತನ್ನ ಮಗಳ ಬಗ್ಗೆ ಭಾರಿ ಎಚ್ಚರಿಕೆಯಿಂದ ಇರಬೇಕಾಗಿರುವುದು ಅವಶ್ಯಕ ಶಾಲೆ, ಕಾಲೇಜ್‌ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಿಮ್ಮ ಮಗಳ ಬಗ್ಗೆ ಜಾಗರೂಕರಾಗಿರಲು ಈ ಆಂದೋಲನ ಆರಂಭಿಸುತ್ತಿರುವುದಾಗಿ ಮುತಾಲಿಕ್ ಹೇಳಿದರು.

ಈ ಆಂದೋಲನಕ್ಕೆ 25ಸಾವಿರ ತರಬೇತಿ ಹೊಂದಿದ ಸೇನೆ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಾರೆ. ಲವ್ ಜಿಹಾದ್ ಕಂಡು ಬರುತ್ತಿರುವ ಸ್ಥಳಗಳಲ್ಲಿ ಸೇನೆ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುತ್ತಾರೆ. ಲವ್ ಜಿಹಾದ್ ಕುಕೃತ್ಯ ಹೊಂದಿದ 25ಸಾವಿರ ಸಿಡಿಗಳು, ಒಂದು ಬುಕ್ ಲೆಟ್‌, 10ಲಕ್ಷ ಹ್ಯಾಂಡ್ ಬಿಲ್‌ಗಳು, 50ಸಾವಿರ ಬಿತ್ತಿಪತ್ರಗಳ ಮೂಲಕ ಆಂದೋಲನ ಆರಂಭಿಸಲಾಗುವುದು ಎಂದು ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ