ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮನನೊಂದು ಗಳಗಳನೆ ಅತ್ತ ಯಡಿಯೂರಪ್ಪ... (BJP | Yeddyurappa | TV | Karnataka | Kannada channel)
Feedback Print Bookmark and Share
 
PTI
ಪಕ್ಷದೊಳಗೆ ತಲೆದೋರಿದ ಬಿಕ್ಕಟ್ಟಿನಿಂದಾಗಿ ನೆರೆ ಸಂತ್ರಸ್ತರ ಬಗ್ಗೆ ಗಮನಕೊಡಲು ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ದೆಹಲಿಯಲ್ಲಿ ಖಾಸಗಿ ಟಿವಿ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ ವೇಳೆ ಗಳಗಳನೆ ಅತ್ತ ಘಟನೆ ನಡೆಯಿತು.

'ಆ ಕಾರಣಕ್ಕಾಗಿ ನಾನು ನೆರೆ ಸಂತ್ರಸ್ತರ ಕ್ಷಮೆ ಕೋರುವುದಾಗಿ ಹೇಳಿದ ಮುಖ್ಯಮಂತ್ರಿಗಳು, ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದೇನೆ. ಆದರೆ ಇನ್ನು ಈ ಬಿಕ್ಕಟ್ಟಿಗಾಗಿ ನಾವು ಇನ್ನೂ ಹೆಚ್ಚಿನ ಸಮಯವನ್ನು ಹಾಳು ಮಾಡಲಾರೆ' ಎಂದು ಕಳಕಳಿ ವ್ಯಕ್ತಪಡಿಸಿದರು.

ಈ ಜನರ ಪೈಕಿ ಒಬ್ಬರೂ ಊಟಕ್ಕೆ ಪರದಾಡಬಾರದು. ಅವರಿಗೆ ಮನೆ ಕಟ್ಟಿಕೊಡ್ತೀನಿ, ಪ್ರತಿಯೊಬ್ಬರಿಗೂ ಆರೋಗ್ಯ ಸೌಲಭ್ಯ, ಶಿಕ್ಷಣ ಸವಲತ್ತು ಕಲ್ಪಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಈ ವಿಚಾರದಲ್ಲಿ ಸೋಲುವುದಿಲ್ಲ ಎಂದು ಭರವಸೆ ನೀಡಿದರು. ನಾನು ನಂಬಿದ ದೇವರು ನನ್ನ ಕೈಬಿಡುವುದಿಲ್ಲ ಎಂದು ಭಾವುಕರಾಗಿ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ