ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಕಂಪನಿಗಳಿಗೆ ಟೆಂಡರ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯೊಬ್ಬ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿ.ಚಂದ್ರಶೇಖರ್ ಅಲಿಯಾಸ್ ವಿಜಯನ್ ಬಂಧಿತ ಆರೋಪಿ. ಈತನಿಂದ ಕೃತ್ಯಕ್ಕೆ ಬಳಸುತ್ತಿದ್ದ ಮರ್ಸಿಡೀಸ್ ಬೆಂಜ್ ಕಾರು ಹಾಗೂ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಜಸ್ತಾನದ ಎಬಿ ಇಂಪ್ಲೆಕ್ಸ್ ಎಂಬ ಕಂಪನಿಯ ಸಿಇಓ ರಾಹುಲ್ ಬಾಟಿಯಾ ಎಂಬುವರಿಗೆ ಅಪರಿಚಿತ ವ್ಯಕ್ತಿ ದೂರವಾಣಿ ಕರೆ ಮಾಡಿ ತಾನು ಕರ್ನಾಟಕದ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ, ಮಂತ್ರಿಗಳ ಬಂಗಲೆಗಳಿಗೆ ನಿರ್ಮಿಸುತ್ತಿರುವ ವಾಷ್ ಬೇಸಿನ್ಸ್, ಗ್ರಾನೈಟ್ಸ್ ಸ್ಟ್ಯಾಂಡ್ ಹಾಗೂ ಕಲ್ಲುಗಳನ್ನು ಪೂರೈಸಲು ಆರ್ಡರ್ ಕೊಡಿಸುವುದಾಗಿ ತಿಳಿಸಿ ಅವರಿಂದ 1.23ಲಕ್ಷ ರೂಪಾಯಿ ಪಡೆದು ಆರೋಪಿ ಚಂದ್ರಶೇಖರ್ ವಂಚನೆ ಮಾಡಿದ್ದ. ಇದೇ ರೀತಿ ಆತ ಶಕ್ತಿವೇಲು ಎಂಬುವರಿಗೆ 65ಸಾವಿರ ರೂ.ವಂಚನೆ ಮಾಡಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಚಂದ್ರಶೇಖರ್ ನಾಗರಬಾವಿ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.