ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾನು ಸಿಎಂ ಆಗಿದ್ರೆ ರೆಡ್ಡಿಗಳನ್ನು ಕಿತ್ತೊಗೆಯುತ್ತಿದ್ದೆ: ಸಿದ್ದರಾಮಯ್ಯ (Siddaramaiah | BJP | Yeddyurappa | Karnataka | Janardana Reddy)
Feedback Print Bookmark and Share
 
NRB
'ನಾನು ಮುಖ್ಯಮಂತ್ರಿಯಾಗಿದ್ದರೆ ಗಣಿಲೂಟಿ ಮಾಡುತ್ತಿದ್ದ ರೆಡ್ಡಿ ಸಹೋದರರನ್ನು ಕಿತ್ತೊಗೆಯುತ್ತಿದ್ದೆ. ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರಿಗೆ ಇದನ್ನು ಮಾಡಲು ತಾಕತ್ತಿಲ್ಲ. ಇಂಥವರು ಅಧಿಕಾರದಲ್ಲಿದ್ದರೆ ರಾಜ್ಯದ ಜನ ಏನು ನಿರೀಕ್ಷಿಸಲು ಸಾಧ್ಯ' ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಅವರು ರಾಂಪುರ, ದೊಡ್ಡಹೊಮ್ಮತಗಡೂರು ಗ್ರಾಮಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಅಧಿಕಾರ ನಡೆಸಲು ಬಾರದವರನ್ನು ಇನ್ನು ಮುಂದೆ ಆಯ್ಕೆ ಮಾಡಬೇಡಿ ಎಂದು ಜನರಿಗೆ ಸಲಹೆ ನೀಡಿದರು.

ಗಣಿಧಣಿಗಳ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿರುವ ಯಡಿಯೂರಪ್ಪನವರು ತಾನೊಬ್ಬ ದುರ್ಬಲ ಮುಖ್ಯಮಂತ್ರಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಗುಡುಗಿದರು.

ಬಡಜನರಿಗಾಗಿ ಜಾರಿಗೆ ತಂದಿರುವ ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ, ರೈತರ ಕಾರ್ಯಗಳನ್ನು ಮಾಡಿಕೊಡಲು ಲಂಚ ಕೇಳುವ ಅಧಿಕಾರಿಗಳ ಕೆನ್ನೆಗೆ ಹೊಡೆಯಿರಿ ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ