ಸಂಕಷ್ಟ ಬಂದಾಗ ಮಾತ್ರ ಜನತಾ ಪರಿವಾರ ಒಂದಾಗಲಿ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅಲವತ್ತುಕೊಳ್ಳುತ್ತಾರೆ ಎಂದು ತೋಟಗಾರಿಕಾ ಸಚಿವ ಉಮೇಶ್ ಕತ್ತಿ ಲೇವಡಿ ಮಾಡಿದ್ದಾರೆ.
ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಕತ್ತಿ, ಬಹಳ ದಿನಗಳ ಹಿಂದೆಯೇ ಜನತಾ ಪರಿವಾರ ಒಂದಾಗಬೇಕೆಂದು ಗೌಡರು ಅರಿತುಕೊಂಡಿದ್ದಿದ್ದರೆ ಇಂದು ಬೇರೆ ಪಕ್ಷ ಅಧಿಕಾರ ನಡೆಸಲು ಸಾಧ್ಯವೇ ಇರತ್ತಿರಲಿಲ್ಲ. ಜೆಡಿಎಸ್‌ಗೆ ಈ ಪರಿಸ್ಥಿತಿ ಬರಲು ಕಾರಣ ಏನು ? ಎಂಬುದನ್ನು ಅವರು ಪುನರ್ ವಿಮರ್ಶೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
ಜನತಾ ಪರಿವಾರ ಈಗ ಮುಗಿದ ಅಧ್ಯಾಯ ಎಂದ ಅವರು ಇತ್ತಿಚೆಗೆ ಜೆಡಿಎಸ್‌ಗೆ ಸೇರಿದ ಸಿಂಧ್ಯ ಎಷ್ಟು ದಿನ ಪಕ್ಷದಲ್ಲಿರುತ್ತಾರೋ ಯಾರಿಗೆ ಗೊತ್ತು. ರಾಷ್ಟ್ರೀಯ ನಾಯಕರ ಮನಸ್ಸಿನಲ್ಲಿ ಸ್ಥಾನ ಇರುವ ತನಕ ಸಿಂಧ್ಯ ಜನತಾಪರಿವಾರದಲ್ಲಿರುತ್ತಾರೆ ಅಷ್ಟೇ ಎಂದು ಕತ್ತಿ ವ್ಯಂಗ್ಯವಾಡಿದ್ದಾರೆ.