ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನೈಸ್ ವಿರುದ್ಧ ಮತ್ತೆ ಜೆಡಿಎಸ್ ಕಾನೂನು ಸಮರ (BJP | Yeddyurappa | NICE | Ashok kheni | Karnataka)
Bookmark and Share Feedback Print
 
ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ನೈಸ್ ವಿರುದ್ಧ ಕಾನೂನು ಸಮರ ಸಾರುತ್ತಿರುವ ಬಂದಿರುವ ಜೆಡಿಎಸ್ ಇದೀಗ ಮತ್ತೊಮ್ಮೆ ಅಖಾಡಕ್ಕೆ ಇಳಿದಿದೆ.

ಮೂಲ ಒಪ್ಪಂದವನ್ನು ಮರೆ ಮಾಚಿ ಸುಪ್ರೀಂಕೋರ್ಟ್‌ಗೆ ಹೇಳಿಕೆ ನೀಡಿರುವ ಸರ್ಕಾರದ ಅಡ್ವೋಕೇಟ್ ಜನರಲ್ ಮತ್ತು ನೈಸ್ ಮುಖ್ಯಸ್ಥ ಅಶೋಕ್ ಖೇಣಿ ವಿರುದ್ಧ ಜಂಗಿ ಕುಸ್ತಿಗೆ ಧುಮುಕಿದೆ. ಇವರಿಬ್ಬರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ನಿರ್ಧರಿಸಿರುವ ಜೆಡಿಎಸ್ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಹಿತಕ್ಕೆ ಮಾರಕವಾದ ಪ್ರಮಾಣಪತ್ರ ಸಲ್ಲಿಸಿರುವ ಅಡ್ವೋಕೇಟ್ ಜನರಲ್ ಅವರನ್ನು ಆ ಸ್ಥಾನದಿಂದ ಕೂಡಲೇ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಹಿರಿಯ ಮುಖಂಡರಾದ ಎಂ.ಸಿ.ನಾಣಯ್ಯ. ಪಿ.ಜಿ.ಆರ್.ಸಿಂಧ್ಯಾ ಮತ್ತು ವೈ.ಎಸ್.ವಿ.ದತ್ತ ಅವರು, ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರ ಹೆಸರು ಪ್ರಸ್ತಾಪಿಸದೇ ತೀವ್ರ ವಾಗ್ದಾಳಿ ನಡೆಸಿದರು.

ಇದುವರೆಗೆ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು 1997ರ ಮೂಲ ಒಪ್ಪಂದದಂತೆ ನೈಸ್ ಕಂಪನಿಗೆ ಭೂಮಿ ನೀಡಲಾಗುವುದು ಎಂದು ತಮ್ಮ ಬದ್ದತೆ ತೋರುತ್ತಾ ಬಂದಿವೆ. ಅಲ್ಲದೇ ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಸಹ ಇದೇ ಒಪ್ಪಂದವನ್ನು ಜಾರಿಗೆ ತರುವಂತೆ ಹಲವು ಬಾರಿ ನಿರ್ದೇಶನ ನೀಡಿವೆ.

ಹೀಗಿದ್ದರೂ ಕೂಡ ಅಡ್ವೋಕೇಟ್ ಜನರಲ್ ನೈಸ್ ಕಂಪನಿ ಮುಖ್ಯಸ್ಥರ ಜತೆ ಶಾಮೀಲಾಗಿ ಸುಮಾರು 50ಸಾವಿರ ಕೋಟಿ ರೂಪಾಯಿಗಳ ಮೋಸ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಸಂಬಂಧಿತ ಮಾಹಿತಿ ಹುಡುಕಿ