ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜೆಡಿಎಸ್ ನೈಸ್ ಕಣ್ಣೀರು ಸಾಬೀತು: ಶೋಭಾ ಪ್ರತಿಕ್ರಿಯೆ (NICE | BBMP Election Result | BBMP Election Live Result | BJP)
Bookmark and Share Feedback Print
 
NRB
ನೈಸ್ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಹೋರಾಟ ಕೇವಲ ಮೊಸಳೆ ಕಣ್ಣೀರು ಮತ್ತು ಚುನಾವಣೆಗಾಗಿ ಮಾಡಿದ ತಂತ್ರವಾಗಿತ್ತು ಎಂಬುದು ಚುನಾವಣಾ ಫಲಿತಾಂಶದಿಂದ ಶ್ರುತಪಟ್ಟಿದೆ ಎಂದು ಬಿಜೆಪಿ ಟೀಕಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾದ ನಂತರ ಅದರ ಮೊತ್ತ ಮೊದಲ ಅಧಿಕಾರ ಬಿಜೆಪಿ ಕೈಗೆ ಬಂದಿರುವುದು ಜನರು ಅಭಿವೃದ್ಧಿಯನ್ನು ಗುರುತಿಸಿದ್ದಾರೆ ಎಂಬುದರ ಸಂಕೇತ ಎಂದರು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಯಶವಂತಪುರ ಬಿಜೆಪಿ ಶಾಸಕಿ, ಮಾಜಿ ಸಚಿವೆ ಶೋಭ ಕರಂದ್ಲಾಜೆ ಅವರು ನೀಡಿರುವ ಪ್ರತಿಕ್ರಿಯೆಯಲ್ಲಿ, ನಮ್ಮದು ಪ್ರಾಮಾಣಿಕ ಹೋರಾಟವಾಗಿತ್ತು. ರೈತರು ಜೆಡಿಎಸ್‌ನ ರಾಜಕೀಯ ಆಟಕ್ಕೆ ಮರುಳಾಗಿಲ್ಲ ಎಂದು ಹೇಳಿದರು.

ಅವರ ಪ್ರತಿಕ್ರಿಯೆಗೆ ಪ್ರಮುಖ ಕಾರಣವೆಂದರೆ, ನೈಸ್ ರಸ್ತೆ ಬಗ್ಗೆ ಸಾಕಷ್ಟು ರಾಜಕೀಯ ಕೋಲಾಹಲ ನಡೆದು, ಬಿಜೆಪಿ-ಜೆಡಿಎಸ್ ನಡುವಿನ ಪ್ರತಿಷ್ಠೆಯ ಸಮರವಾಗಿ ಇದು ಪರಿಣಮಿಸಿತ್ತು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಯುದ್ದಕ್ಕೆ ಸುಮಾರು 35 ವಾರ್ಡ್‌ಗಳು ಬಿಬಿಎಂಪಿ ಚುನಾವಣಾ ಕಣದಲ್ಲಿ ಭಾರಿ ಕುತೂಹಲ ಕೆರಳಿಸಿದ್ದವು. ಇದೀಗ ಇವುಗಳಲ್ಲಿ ಹೆಚ್ಚಿನ ಸ್ಥಾನಗಳು ಬಿಜೆಪಿ ಪಾಲಾಗಿದ್ದು, ಉಳಿದವು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಂಚಿ ಹೋಗಿವೆ.

ಯಶವಂತಪುರ, ಪದ್ಮನಾಭ ನಗರ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಈ ವಾರ್ಡ್‌ನ ಮತದಾರರನ್ನು ಗಮನದಲ್ಲಿಟ್ಟುಕೊಂಡೇ ರಾಜಕೀಯ ಪಕ್ಷಗಳೆಲ್ಲವೂ ಕಳೆದ ಮೂರ್ನಾಲ್ಕು ತಿಂಗಳಿಂದ ಸಾಕಷ್ಟು ಕಸರತ್ತು ನಡೆಸಿದ್ದವು. ರೈತರ ಧರಣಿ, ಪ್ರತಿಭಟನೆ, ರಾಜಕೀಯ ಮುಖಂಡರ ಕೂಗಾಟ, ಗದ್ದಲ ಇತ್ಯಾದಿ ಎಲ್ಲವನ್ನೂ ಈ ವಾರ್ಡ್‌ಗಳು ಕಂಡಿದ್ದವು. ಈ ವ್ಯಾಪ್ತಿಯಲ್ಲಿ ರೈತ ಕುಟುಂಬಗಳೇ ಹೆಚ್ಚಿರುವುದು ಜೆಡಿಎಸ್‌ನ ಹೋರಾಟದ ಕಾವು ಏರಲು ಕಾರಣವಾಗಿತ್ತು ಎಂಬುದು ಬಿಜೆಪಿ ಟೀಕೆಯಾಗಿತ್ತು. ಅಂದರೆ ನೈಸ್ ರಸ್ತೆಗೆ ತಮ್ಮ ಜಮೀನು, ಹೊಲ ಗದ್ದೆ ಬಿಟ್ಟುಕೊಟ್ಟ ಕುಟುಂಬಗಳೇ ಇಲ್ಲಿದ್ದವು.

ಈ ವ್ಯಾಪ್ತಿಯ ವಾರ್ಡುಗಳು ಹೀಗಿವೆ:
ನಾಯಂಡಹಳ್ಳಿ
ಕುಮಾರಸ್ವಾಮಿ ಬಡಾವಣೆ
ಚಿಕ್ಕಕಲ್ಲಸಂದ್ರ
ಉತ್ತರಹಳ್ಳಿ
ಜರಗನ ಹಳ್ಳಿ
ಪುಟ್ಟೇನ ಹಳ್ಳಿ
ಉಲ್ಲಾಳು
ಬನಶಂಕರಿ ದೇವಸ್ಥಾನ
ಯಲಚೇನ ಹಳ್ಳಿ
ಪದ್ಮನಾಭನಗರ
ಬಿಲೇಕ ಹಳ್ಳಿ
ಹೊಂಗಸಂದ್ರ
ಮಂಗಮ್ಮನ ಪಾಳ್ಯ
ಸಿಂಗಸಂದ್ರ
ಬೇಗೂರು
ಅರಕೆರೆ
ಗೊಟ್ಟಿಗೆರೆ
ಕೋಣನಕುಂಟೆ
ಅಂಜನಾಪುರ
ವಸಂತಪುರ
ಹೆಮ್ಮಿಗೆಪುರ
ಜೆ.ಪಿ.ನಗರ
ಸಾರಕ್ಕಿ
ದೀಪಾಂಜಲಿನಗರ
ಕೆಂಗೇರಿ
ರಾಜರಾಜೇಶ್ವರಿನಗರ
ಹೊಸಕೆರೆಹಳ್ಳಿ

ಪೂರ್ಣ ಫಲಿತಾಂಶ ವಿವರ ಇಲ್ಲಿದೆ
ಸಂಬಂಧಿತ ಮಾಹಿತಿ ಹುಡುಕಿ