ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 1ರಿಂದ 10ನೇ ತರಗತಿವರೆಗೆ ಪಠ್ಯ ಬದಲಾವಣೆ: ಕಾಗೇರಿ (BJP | Yeddyurappa | Kageri | JDS | Exam)
Bookmark and Share Feedback Print
 
ಮುಂದಿನ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿವರೆಗೆ ಎಲ್ಲಾ ಪಠ್ಯ ಪುಸ್ತಕಗಳನ್ನು ಸಂಪೂರ್ಣವಾಗಿ ಬದಲಿಸಬೇಕೆಂಬ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ 2010 ರಿಂದ 14ರ ವೇಳೆಗೆ 1 ರಿಂದ 10ನೇ ತರಗತಿವರೆಗಿನ ಪೂರ್ಣ ಪಠ್ಯಕ್ರಮವನ್ನು ಬದಲಾಯಿಸಲಾಗುವುದೆಂದು ಅವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಕ್ರಮ ಬದಲಾವಣೆ ಕುರಿತಂತೆ 2005ರಲ್ಲಿ ಸಮಿತಿ ವರದಿ ನೀಡಿದ್ದು, ಈ ವರದಿಯನ್ನು ಎನ್‌ಸಿಇಆರ್‌ಟಿ ಒಪ್ಪಿಕೊಂಡಿದೆ. ಅದರಂತೆ ಕಲಿಕೆ, ಬೋಧನೆಗೆ ವಿಶೇಷ ಕ್ರಮಗಳು, ಕಂಠಪಾಠ ಮುಕ್ತ, ಪರೀಕ್ಷೆ ಹೊರೆ ಕಡಿಮೆ ಮಾಡುವಂತಹ ಹಾಗೂ ದೇಶಕ್ಕೆ ಮೊದಲ ಅಭಿಪ್ರಾಯ ಬಿಂಬಿಸುವಂತಹ, ಪರಿಸರ ಅಧ್ಯಯನವನ್ನೊಳಗೊಂಡ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ವಿವರಿಸಿದರು.

ಅಲ್ಲದೆ, ಬ್ರಿಟಿಷ್ ಕಾಲದ ಪದ್ಧತಿಯ ಪಠ್ಯ ಬದಲಾಯಿಸಿ ನಮ್ಮ ಆಧುನಿಕ ಪದ್ಧತಿಯ ಪಠ್ಯ ಅಳವಡಿಸಲಾಗುವುದು ಎಂದು ತಿಳಿಸಿದ ಅವರು, ಈ ನಿಟ್ಟಿನಲ್ಲಿ 2011-12ರವರೆಗೆ 1 ರಿಂದ 5ನೇ ತರಗತಿವರೆಗೆ ಪಠ್ಯಕ್ರಮ ಬದಲಾವಣೆ, 2012-13ರವರೆಗೆ 6 ರಿಂದ 8ನೇ ತರಗತಿವರೆಗೆ ಪಠ್ಯಕ್ರಮ ಬದಲಾವಣೆ, 2013ರಿಂದ 14 ರವರೆಗೆ 9 ಮತ್ತು 10ನೇ ತರಗತಿಗಳ ಪಠ್ಯಕ್ರಮ ಬದಲಿಸುವ ಚಿಂತನೆ ನಡೆಸಲಾಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ