ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಮಾನ ದುರಂತ: ಹಾರಿ ಪಾರಾದ ಅದೃಷ್ಟವಂತರು (Air India Express aircraft | Mangalore | aircraft Blast,)
Bookmark and Share Feedback Print
 
ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ಮಂಗಳೂರಿನ ಕೆಂಜಾರು ಬಳಿಯಿರುವ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವಾಗ ನಿಯಂತ್ರಣ ತಪ್ಪಿದ್ದರಿಂದ ಸಂಭವಿಸಿದ ಭಾರೀ ದುರಂತದಲ್ಲಿ ಎಂಟುಮಂದಿ ಅದೃಷ್ಟವಶಾತ್ ಪಾರಾದ ಘಟನೆಯೂ ನಡೆದಿದೆ.

ವಿಮಾನದಲ್ಲಿ ಒಟ್ಟು 160 ಮಂದಿ ಪ್ರಯಾಣಿಸುತ್ತಿದ್ದು, 6 ಮಂದಿ ಸಿಬ್ಬಂದಿಗಳಿದ್ದರು. ದುರಂತದಲ್ಲಿ 158ಮಂದಿ ಸಾವನ್ನಪ್ಪಿದ್ದಾರೆ, ಆದರೆ ಈ ದುರ್ಘಟನೆಯಲ್ಲಿ ಸಾವಿನ ಮನೆಯ ಕದ ತಟ್ಟಿಯೂ ಅಚ್ಚರಿಕರ ರೀತಿಯಲ್ಲಿ ಮೊಯಿನ್ ಕುಟ್ಟಿ -ಕಣ್ಣೂರು, ಪ್ರದೀಶ್ ಮಂಗಳೂರು, ಉಮರ್ ಫಾರೂಕ್, ಅಬ್ದುಲ್ ಸತ್ತಾರ್ ಪುತ್ತೂರು, ಕೃಷ್ಣನ್-ಕಾಸರಗೋಡು, ಡಾ.ಸಬ್ರಿನಾ, ಅರುಣ್ ಜೊಯೇಲ್ ಫರ್ನಾಂಡಿಸ್ , ಜೋಯಲ್ ಪ್ರತಾಪ್ ಡಿಸೋಜ ಸೇರಿದಂತೆ ಎಂಟು ಮಂದಿ ಬದುಕುಳಿದಿದ್ದಾರೆ

ಅಬ್ದುಲ್ ಸತ್ತಾರ್, ಮಾತನಾಡಿ, ನನ್ನ ಕಾಲಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ, ವಿಮಾನ 6-8 ಅಡಿ ಎತ್ತರದಲ್ಲಿದ್ದಾಗ ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ವಿಮಾನದಲ್ಲಿ ಎಲ್ಲಾ ಪ್ರಯಾಣಿಕರು ಜೋರಾಗಿ ಅರಚುತಿದ್ದರು. ನಾನು ಮುಳ್ಳಿನ ಗಿಡದ ಮೇಲೆ ಬಿದ್ದಿದ್ದ ನನ್ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯಲ್ಲಿ ಬದುಕುಳಿದವರನ್ನು ಮಂಗಳೂರಿನ ಎಜೆ ಆಸ್ಪತ್ರೆ, ಎಸ್.ವಿ.ಎಸ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ವಿವರಿಸಿವೆ.

ಶಾಸಕ ಹ್ಯಾರಿಸ್ ಸಂಬಂಧಿ ಸಾವು: ಬಜ್ಪೆ ವಿಮಾನ ನಿಲ್ದಾಣ ಸಮೀಪ ಸಂಭವಿಸಿದ ದುರಂತದಲ್ಲಿ ಶಾಂತಿನಗರ ಶಾಸಕ ಹ್ಯಾರಿಸ್ ಅವರ ಸಂಬಂಧಿ ಇಬ್ರಾಹಿಂ ಖಲೀಲ್ ಎಂಬವರು ಸಾವನ್ನಪ್ಪಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಅಲ್ಲದೇ ವಿಮಾನದಲ್ಲಿ ಒಟ್ಟು 18ಮಕ್ಕಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದರಲ್ಲಿ ನಾಲ್ಕರ ಹರೆಯದ ಇಬಾಜಿನ್ ಎಂಬ ಮಗು ಕೂಡ ಸಾವನ್ನಪ್ಪಿದೆ.

ಆಕ್ರಂದನ, ದಟ್ಟ ಹೊಗೆ, ಭರದ ರಕ್ಷಣಾ ಕಾರ್ಯ:ವಿಮಾನ ಭಸ್ಮವಾದ ಸ್ಥಳದಲ್ಲಿ ದಟ್ಟವಾದ ಹೊಗೆ ಇಡೀ ಪ್ರದೇಶವನ್ನು ಆವರಿಸಿದ್ದು, ಕಮಾಂಡೋ ಸಿಬ್ಬಂದಿಗಳು, ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 25 ಆಂಬ್ಯುಲೆನ್ಸ್‌ಗಳು ಗಾಯಾಳುಗಳನ್ನು, ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸುತ್ತಿವೆ. ಸ್ಥಳದಲ್ಲಿಯೇ 15ಮಂದಿ ವೈದ್ಯರ ತಂಡ ಚಿಕಿತ್ಸೆಯನ್ನು ನೀಡುತ್ತಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲ ಗ್ರಾಮ, ಜಿಲ್ಲೆಯ ಜನರು ತಂಡೋಪತಂಡವಾಗಿ ದುರ್ಘಟನೆಯನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ.

ವಿಮಾನ ದುರಂತದಲ್ಲಿ 158 ಮಂದಿ ಬಲಿ
ಸಂಬಂಧಿತ ಮಾಹಿತಿ ಹುಡುಕಿ